ಚಿಕ್ಕಮಗಳೂರು: ಪ್ರವಾಸಿಗರು ಕುಡಿದು ಬಿಸಾಡಿದ ಬಾಟಲಿಯಲ್ಲಿದ್ದ ಮಿರಿಂಡಾ ಕುಡಿಯಲು ಹೋಗಿ ತಲೆಸಿಕ್ಕಿ ಹಾಕಿಕೊಂಡು ಹಾವು ದಾರಿ ಕಾಣದೆ ಕಂಗಾಲಾದ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಗ್ರಾಮದಲ್ಲಿ ನಡೆದಿದೆ.ರಸ್ತೆ ಬದಿಯಲ್ಲಿದ್ದ ಬಾಟಲಿಗೆ ತಲೆಹಾಕಿದ ಕೆರೆಹಾವು ತಲೆಯನ್ನ ಹೊರತೆಗೆಯಲಾಗದೆ ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ಬದಿಯಲ್ಲೇ ಹೋರಾಟ ನಡೆಸಿದೆ. ಆದರೆ ಹಾವಿಗೆ ತಲೆ ಹೊರತೆಗೆಯಲು ಸಾಧ್ಯವಾಗಿಲ್ಲ. ರಸ್ತೆಯಲ್ಲಿ ಬಿದ್ದು, ಹೊರಳಾಡಿ ಏನೇ ಹರಸಾಹಸ ಪಟ್ಟರೂ, ಹಾವಿಗೆ ತಲೆಯನ್ನ ಬಾಟಲಿನಿಂದ ತೆಗೆಯಲು ಸಾಧ್ಯವಾಗಿಲ್ಲ.ಇದೇ ವೇಳೆ ಚಿಕ್ಕಮಗಳೂರಿನಿಂದ ಮಲ್ಲಂದೂರಿಗೆ ಹೋಗುತ್ತಿದ್ದ ವೈಲ್ಡ್ ಕ್ಯಾಟ್ ಸಿ ಮುಖ್ಯಸ್ಥ ಶ್ರೀದೇವ್ ಹಾವನ್ನ ಕಂಡು ಪತ್ನಿಯ ಜೊತೆಗೂಡಿ ಹಾವಿನ ತಲೆಯನ್ನ ಬಾಟಲಿಯಿಂದ ಹೊರತೆಗೆದಿದ್ದಾರೆ. ಶ್ರೀದೇವ್ ಅವರ ಪತ್ನಿ ಉದ್ದವಾದ ಕೋಲಿನಿಂದ ಹಾವಿನ ತಲೆ ಮೇಲಿದ್ದ ಬಾಟಲಿಗೆ ಒತ್ತಿ ಹಿಡಿದಿದ್ದಾರೆ. ಇದೇ ವೇಳೆ ಶ್ರೀದೇವ್ ಹಾವಿನ ಬಾಲ ಹಿಡಿದು ಎಳೆದಿದ್ದು, ಈ ಮೂಲಕ ಬಾಟಲಿಯಿಂದ ಹಾವನ್ನು ರಕ್ಷಿಸಿದ್ದಾರೆ.Sign in to your account
Username or Email Address


Password

 Remember Me


