ಬಾಗಲಕೋಟೆ: ಬಿಜೆಪಿ ಕಾರ್ಯಕರ್ತರೊಬ್ಬರ ಮೇಲೆ ಸೋಮವಾರ ತಡರಾತ್ರಿ ಪಕ್ಷದ ನಗರ ಘಟಕದ ಅಧ್ಯಕ್ಷ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.ಜಮಖಂಡಿ ನಗರದ ಕಲೂತಿ ಪೆಟ್ರೋಲ್ ಬಂಕ್ ನಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಬಿಜೆಪಿ ಕಾರ್ಯಕರ್ತ ಉಮೇಶ್ ಅಲಮೇಲಕರ್ ಮೇಲೆ ಹಲ್ಲೆ ನಡೆದಿದೆ. ಜಮಖಂಡಿ ಬಿಜೆಪಿಯ ನಗರ ಘಟಕದ ಅಧ್ಯಕ್ಷ ಶ್ರೀಧರ ಕೊಣ್ಣೂರ ಹಾಗೂ ಅವರ ಸಹಚರರು ಸೇರಿ ಕಬ್ಬಿಣದ ರಾಡ್ ಹಾಗೂ ಸೋಡಾ ಬಾಟಲ್‍ನಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.ಈ ಹಲ್ಲೆಯಿಂದ ಉಮೇಶ್ ಅವರ ತಲೆ ಹಾಗೂ ಎಡಗಣ್ಣಿಗೆ ಗಾಯವಾಗಿದ್ದು, ಗಾಯಾಳುವನ್ನು ಜಮಖಂಡಿ ಕೆ.ಎಲ್.ಇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಮಖಂಡಿ ಉಪಚುನಾವಣೆ ವೇಳೆ ಇವರಿಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು. ಸೋಮವಾರ ಈ ಬಗ್ಗೆ ಶುರುವಾದ ಜಗಳ ನಂತರ ಹಲ್ಲೆಗೆ ತಿರುಗಿತ್ತು.ಸದ್ಯ ಜಮಖಂಡಿ ನಗರ ಪೊಲೀಸ್ ಠಾಣೆಯಲ್ಲಿ ಉಮೇಶ್ ಅಲಮೇಲಕರ್ ಅವರು ಶ್ರೀಧರ ಕೊಣ್ಣೂರ ಅವರ ವಿರುದ್ಧ ದೂರು ನೀಡಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.Sign in to your account
Username or Email Address


Password

 Remember Me


