ಬಳ್ಳಾರಿ: ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಆಯತಪ್ಪಿ ಹಳಿಗೆ ಬೀಳುತ್ತಿದ್ದ ಪ್ರಯಾಣಿಕನನ್ನು ರೈಲ್ವೆ ಭದ್ರತಾ ಸಿಬ್ಬಂದಿ ಬದುಕುಳಿಸಿದ ಘಟನೆ ಹೊಸಪೇಟೆಯಲ್ಲಿ ನಡೆದಿದೆ.ಭಾನುವಾರ ಸಂಜೆ ಹೊಸಪೇಟೆಯಿಂದ ತಿರುಪತಿಗೆ ತೆರಳುತ್ತಿದ್ದ ರೈಲಿಗೆ ಕೊನೆಗಳಿಗೆಯಲ್ಲಿ ಯಮನಪ್ಪ ಎನ್ನುವ ಪ್ರಯಾಣಿಕ ಚಲಿಸುವ ರೈಲು ಹತ್ತಲು ಮುಂದಾದ್ದರು. ಈ ವೇಳೆ ಪ್ರಯಾಣಿಕ ಯಮನಪ್ಪ ಕಾಲುಜಾರಿ ಹಳಿಗೆ ಬಿಳುವುದರಲ್ಲಿ ಇದ್ದರು.ಈ ವೇಳೆ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಎಸ್ ಕಾಳಣ್ಣರ ಸಮಯ ಪ್ರಜ್ಞೆಯಿಂದ ಪ್ರಯಾಣಿಕನನ್ನು ಹೊರಗೆ ಎಳೆದು ಹಾಕಿ ಬದುಕುಳಿಸಿದ್ದಾರೆ. ರೈಲ್ವೆ ಭದ್ರತಾ ಸಿಬ್ಬಂದಿ ಕಾಳಣ್ಣರ ಧೈರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.ಭದ್ರತಾ ಸಿಬ್ಬಂದಿಯ ರಕ್ಷಣಾ ಕಾರ್ಯಾಚರಣೆ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.Sign in to your account
Username or Email Address


Password

 Remember Me


