ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ನಾವು ಕೆಟ್ಟೆವು ಎಂದು ಜೆಡಿಎಸ್ ನಾಯಕ ಶರವಣ ಹೇಳಿದ್ದಾರೆ.ಪಬ್ಲಿಕ್ ಟಿವಿಯ ಚುನಾವಣೋತ್ತರ ಸಮೀಕ್ಷೆಯ ಫಲತಾಂಶದ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಯಕರ ನಡುವೆ ಮೈತ್ರಿ ಆಗಿದ್ದರೂ ತಳ ಮಟ್ಟದಲ್ಲಿ  ಇದು ಕೆಲಸ ಮಾಡಲಿಲ್ಲ. ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ ಎಂದು ತಿಳಿಸಿದರು.ಮುಂದೆ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನಸಭಾ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಪರವಾಗಿ ಮತ ಕೇಳಲು ಆಗುವುದಿಲ್ಲ. ನಾವು ನಮ್ಮ ಪಕ್ಷದ ಪರವಾಗಿ ಮತ ಕೇಳಬೇಕು ಎಂದು ಹೇಳಿದರು.ಹೊಂದಾಣಿಕೆ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದೇ ಇದ್ದರೂ ಈ ಸಮೀಕ್ಷೆ ನೋಡಿದಾಗ ಕಳೆದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಎಷ್ಟು ಸ್ಥಾನ ಗಳಿಸಿತ್ತೋ ಅಷ್ಟೇ ಸ್ಥಾನವನ್ನು ಗಳಿಸಲಿದೆ. ಕಾಂಗ್ರೆಸ್, ಜೆಡಿಎಸ್ ಮೈತ್ರಿಗೂ ಅಷ್ಟೇ ಸ್ಥಾನ ಸಿಗಲಿದೆ ಎಂದರು.Sign in to your account
Username or Email Address


Password

 Remember Me


