ಬಳ್ಳಾರಿ: ಪತಿ ಮತ್ತು ಪತ್ನಿ ಇಬ್ಬರೂ ಒಂದೇ ದಿನ ಸಾವು ಕಂಡಿರುವ ಘಟನೆ ಬಳ್ಳಾರಿ ತಾಲೂಕು ಬಿಸಲಳ್ಳಿಯಲ್ಲಿ ನಡೆದಿದೆ.ಬೆಳ್ಳಿ ಕಟ್ಟೆಪ್ಪ (86) ಮತ್ತು ಪತ್ನಿ ಲಕ್ಷ್ಮಮ್ಮ (80) ಮೃತ ದಂಪತಿ. ಬೆಳ್ಳಿ ಕಟ್ಟೆಪ್ಪ ನಿವೃತ್ತ ಶಿರಸ್ತೇದಾರರಾಗಿದ್ದು, ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ಇಂದು ನಸುಕಿನ ಜಾವ ಕಟ್ಟೆಪ್ಪ ಮೃತಪಟ್ಟಿದ್ದಾರೆ.ಪತಿಯ ಸಾವಿನ ನೋವಿಂದ ಪತ್ನಿ ಲಕ್ಷ್ಮಮ್ಮ ಒಂದು ಗಂಟೆಯ ನಂತರ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಹೀಗಾಗಿ ಮದುವೆಯಾದಗಿನಿಂದ ಒಟ್ಟಾಗಿ ಸಾಂಸಾರಿಕ ಜೀವನ ಮಾಡುತ್ತಿದ್ದ ಬೆಳ್ಳಿ ಕಟ್ಟೆಪ್ಪ ಮತ್ತು ಲಕ್ಷ್ಮಮ್ಮ ಸಾವಿನಲ್ಲೂ ಒಂದಾಗಿದ್ದಾರೆ. ಒಂದೇ ದಿನ ದಂಪತಿಯ ಸಾವಿನ್ನಪ್ಪಿದ್ದರಿಂದ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.ಸಾವಿನಲ್ಲೂ ಒಂದಾದ ದಂಪತಿಯ ಅಂತ್ಯಕ್ರಿಯೆಯನ್ನೂ ಅಕ್ಕಪಕ್ಕದಲ್ಲಿಯೇ ಮಾಡಬೇಕೆಂದು ಮಕ್ಕಳು ತೀರ್ಮಾನಿಸಿದ್ದಾರೆ.Sign in to your account
Username or Email Address


Password

 Remember Me


