ಬೆಂಗಳೂರು: ಪ್ರಕಾಶ್ ಹೆಬ್ಬಾಳ ನಿರ್ದೇಶನದ ಹಫ್ತಾ ಚಿತ್ರವೀಗ ಬಿಡುಗಡೆಯ ಸನ್ನಾಹದಲ್ಲಿದೆ. ಮಾಸ್ ಹಾಗೂ ಕ್ಯಾಚೀ ಟೈಟಲ್ಲಿನ ಮೂಲಕವೇ ಸದ್ದು ಮಾಡುತ್ತಾ ಬಂದಿರೋ ಈ ಚಿತ್ರದ ಆಡಿಯೋ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿ ವ್ಯಾಪಕ ಮೆಚ್ಚುಗೆಯನ್ನೂ ಗಳಿಸಿಕೊಂಡಿದೆ. ಈ ಅಲೆಯಲ್ಲಿಯೇ ವೀಡಿಯೋ ಹಾಡೊಂದನ್ನು ಬಿಡುಗಡೆ ಮಾಡಲು ಚಿತ್ರ ತಂಡ ಸಜ್ಜುಗೊಂಡಿದೆ.ಈ ಲಿರಿಕಲ್ ವೀಡಿಯೋ ನಾಳೆ ಸಂಜೆ ಬಿಡುಗಡೆಯಾಗಲಿದೆ. ಇದು ಅಪ್ಪಟ ಮೆಲೋಡಿ ಹಾಡು. ವಿಶೇಷವೆಂದರೆ ಇದನ್ನು ಮಾಸ್ ಹೀರೋ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅವರು ಬಿಡುಗಡೆಗೊಳಿಸಲಿದ್ದಾರೆ!ಈ ಹಾಡಿಗೆ ವಿಜಯ್ ಯಾಡ್ರ್ಲಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಎಂಥವರನ್ನೂ ಮೋಹಕ್ಕೀಡು ಮಾಡುವಂಥಾ ಸಾಲುಗಳನ್ನು ಹೊಂದಿರೋ ಈ ಹಾಡನ್ನು ಅನುರಾಧಾ ಭಟ್ ಮತ್ತು ಹರಿಚರಣ್ ಹಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಆಡಿಯೋ ಬಿಡುಗಡೆಯಾಗಿತ್ತಲ್ಲಾ? ಅದರಲ್ಲಿನ ಎಲ್ಲ ಹಾಡುಗಳೂ ಜನಮಾನಸ ತಲುಪಿಕೊಂಡಿವೆ. ಅದರಲ್ಲಿಯೂ ಟೈಟಲ್ ಸಾಂಗ್ ಅಂತೂ ಟ್ರೆಂಡಿಂಗ್ ನಲ್ಲಿದೆ. ನಾಳೆ ಬಿಡುಗಡೆಯಾಗಲಿರೋ ಈ ಮೆಲೋಡಿ ಲಿರಿಕಲ್ ವೀಡಿಯೋ ಸಾಂಗ್ ಕೂಡಾ ಅಂಥಾದ್ದೇ ಮೋಡಿ ಮಾಡೋ ಭರವಸೆ ಚಿತ್ರತಂಡದಲ್ಲಿದೆ.ಈ ಹಿಂದೆ ದಯಾಳ್ ಮತ್ತು ರಮೇಶ್ ಅರವಿಂದ್ ಅವರ ಜೊತೆ ಕೆಲಸ ಮಾಡಿರುವ ಪ್ರಕಾಶ್ ನಿರ್ದೇಶನದ ಮೊದಲ ಚಿತ್ರ ಹಫ್ತಾ. ಮೈತ್ರಿ ಮಂಜುನಾಥ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವರ್ಧನ್ ತೀರ್ಥಹಳ್ಳಿ ಮತ್ತು ರಾಘವ್ ನಾಗ್ ನಾಯಕರಾಗಿ ನಟಿಸಿದ್ದಾರೆ. ಇದುವರೆಗೂ ಹಲವಾರು ಚಿತ್ರಗಳಲ್ಲಿ ಖಳನಾಗಿ ಅಬ್ಬರಿಸಿರುವ ವರ್ಧನ್ ತೀರ್ಥಹಳ್ಳಿ ಈ ಸಿನಿಮಾ ಮೂಲಕ ನಾಯಕನಾಗಿದ್ದಾರೆ. ಕರಾವಳಿ ತೀರದ ಭೂಗತ ಜಗತ್ತಿನ ಕಥೆ ಹೊಂದಿರುವ ಈ ಚಿತ್ರದಲ್ಲಿ ವರ್ಧನ್ ಎರಡು ಶೇಡುಗಳ ಪಾತ್ರದಲ್ಲಿ ಮಿಂಚಿದ್ದಾರಂತೆ.Sign in to your account
Username or Email Address


Password

 Remember Me


