ಬಾಗಲಕೋಟೆ: ಅಪಘಾತಕ್ಕೀಡಾಗಿದ್ದ ಯೋಧ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಅರಕೇರಿಯಲ್ಲಿ ನಡೆದಿದೆ.ಅರಕೇರಿ ಗ್ರಾಮದ ನಿವಾಸಿ ವೆಂಕಟೇಶ್ ಬೆನಕಟ್ಟಿ (31) ಮೃತ ಯೋಧ. ವೆಂಕಟೇಶ್ ಬೆನಕಟ್ಟಿ ಅವರು ಆರು ತಿಂಗಳ ಹಿಂದೆ ತಮ್ಮ ಗ್ರಾಮಕ್ಕೆ ಬಂದಿದ್ದಾಗ ಬೈಕಿನಿಂದ ಬಿದ್ದು ತಲೆ ಮತ್ತು ಬೆನ್ನಿಗೆ ಗಂಭೀರವಾಗಿ ಗಾಯಗಳಾಗಿತ್ತು. ತಕ್ಷಣ ಅವರನ್ನು ಸೋಲಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.ಮೃತ ವೆಂಕಟೇಶ್ ಸಿಐಎಸ್‍ಎಫ್ ಯೋಧರಾಗಿದ್ದು, ತೆಲಂಗಾಣದ ಸಿಂಗ್ರೋಣಿ ಎಂಬಲ್ಲಿ ಸೇವೆ ಸಲ್ಲಿಸುತ್ತಿದ್ದರು. 2009ರಲ್ಲಿ ವೆಂಕಟೇಶ್ ಸೇನೆಗೆ ನೇಮಕಗೊಂಡಿದ್ದರು. ಇಂದು ತಮ್ಮ ಪತ್ನಿ, ಮಗು ಮತ್ತು ಪೋಷಕರನ್ನು ಅಗಲಿದ್ದಾರೆ.Sign in to your account
Username or Email Address


Password

 Remember Me


