ಮೈಸೂರು: ಟೆನ್ಷನ್‍ನಲ್ಲಿರುವ ಸಮಯದಲ್ಲಿ ಬಂದು 2 ಸಾವಿರ ರೂಪಾಯಿಗೆ ಚಿಲ್ಲರೆ ಕೇಳಿದ್ದ ಎಂದು ಹಲ್ಲೆ ಮಾಡಿದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಕೆರೆಯಲ್ಲಿ ನಡೆದಿದೆ.ಸಚಿನ್ ಹಲ್ಲೆ ಮಾಡಿದ ವ್ಯಕ್ತಿ. ಚಿಲ್ಲರೆಗಾಗಿ ಉಮೇಶ್ ಎಂಬವರು ನಗರದ ಅಂಗಡಿಯೊಂದಕ್ಕೆ ಬಂದಿದ್ದನು. ಉಮೇಶ್ ಮೊದಲು ಬಾರ್ ನಲ್ಲಿ ಚಿಲ್ಲರೆ ಕೇಳಿದ್ದನು. ಅಲ್ಲಿ ಸಿಗದಕ್ಕೆ ಪಕ್ಕದ ಅಂಗಡಿಯಲ್ಲಿ ಕೇಳಿದ್ದಾನೆ. ಈ ವೇಳೆ ಅಂಗಡಿಯಲ್ಲಿದ್ದ ಸಚಿನ್ ಯಾವುದೋ ಆಲೋಚನೆಯಲ್ಲಿದ್ದ.ಈ ವೇಳೆ ಉಮೇಶ್, ಎರಡೆರಡು ಬಾರಿ ಚಿಲ್ಲರೆ ಕೇಳಿದ ಎಂದು ಕೋಪದಲ್ಲಿ ಸಚಿನ್ ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಹೀಗೆ ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಹಲ್ಲೆಗೊಳಗಾದ ವ್ಯಕ್ತಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ.ಈ ಬಗ್ಗೆ ಮೈಸೂರಿನ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


