ಚಿಕ್ಕಬಳ್ಳಾಪುರ: ಬಾಲ್ಯ ವಿವಾಹವಾದ ಹಿನ್ನೆಲೆಯಲ್ಲಿ ಮದುವೆಯಾದ ಮೂರೇ ಗಂಟೆಗೆ ನೂತನ ದಂಪತಿಯನ್ನು ಚಿಕ್ಕಬಳ್ಳಾಪುರ ಬಾಲ್ಯವಿವಾಹ ತಡೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಚಿಕ್ಕಬಳ್ಳಾಪುರ ನಗರದ ಚಿತ್ರಾವತಿ ಕಲ್ಯಾಣ ಮಂಪಟದಲ್ಲಿ ಇಂದು ಮುಂಜಾನೆ ಬಾಲ್ಯ ವಿವಾಹ ನಡೆದಿದೆ. ಚಿಕ್ಕಬಳ್ಳಾಪುರ ಮೂಲದ ವರ ಹಾಗೂ ಚಿಂತಾಮಣಿ ಮೂಲದ ವಧುವಿನೊಂದಿಗೆ ವಿವಾಹ ನಡೆದಿದೆ. 16 ವರ್ಷದ ಬಾಲಕಿಗೆ 28 ವರ್ಷದ ಯುವಕನ ಜೊತೆ ಮದುವೆ ಮಾಡಲಾಗಿದೆ.ಈ ಬಗ್ಗೆ ಮಾಹಿತಿ ಪಡೆದ ಬಾಲ್ಯವಿವಾಹ ತಡೆ ಅಧಿಕಾರಿಗಳು ಕಲ್ಯಾಣ ಮಂಪಟಕ್ಕೆ ಹೋಗಿ ವಧು ವರ ಸೇರಿದಂತೆ ಅವರ ಪಾಲಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಮಕ್ಕಳ ಕಲ್ಯಾಣ ಸಮಿತಿ ಅವರ ಮುಂದೆ ಹಾಜರು ಪಡಿಸಿದ್ದು, ವಿಚಾರಣೆ ಮಾಡಿದ್ದಾರೆ.ಸದ್ಯಕ್ಕೆ ಬಾಲಕಿಯ ಜವಾಬ್ದಾರಿಯನ್ನು ಮಕ್ಕಳ ಕಲ್ಯಾಣ ಸಮಿತಿ ವಹಿಸಿಕೊಂಡಿದ್ದು, ಈ ಬಗ್ಗೆ ವರ ಮತ್ತು ಬಾಲಕಿಯ ಪೋಷಕರ ವಿರುದ್ಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರ ದಾಖಲಿಸಲು ಮುಂದಾಗಿದ್ದಾರೆ.






 Advertisement 




Sign in to your account
Username or Email Address


Password

 Remember Me


