ಚಾಮರಾಜನಗರ: ನವಿಲನ್ನು ಅರ್ಧ ನುಂಗಿ ಪರದಾಡುತ್ತಿದ್ದ ಹೆಬ್ಬಾವೊಂದನ್ನು ರಕ್ಷಣೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಹೊಂಡರಬಾಳು ಗ್ರಾಮದ ಜಮೀನೊಂದರಲ್ಲಿ ನಡೆದಿದೆ.ಬೆಳಗ್ಗಿನ ಜಾವ ಹೆಬ್ಬಾವು ನವಿಲನ್ನು ಹಿಡಿದು ನುಂಗಲು ಮುಂದಾಗಿದೆ. ಆದರೆ ಹೆಬ್ಬಾವಿನ ಗಂಟಲಿನ ಭಾಗದಲ್ಲಿ ನವಿಲು ಸಿಕ್ಕಿ ಹಾಕಿಕೊಂಡಿದೆ. ಪರಿಣಾಮ ಹೆಬ್ಬಾವು ನವಿಲನ್ನು ನುಂಗಲು ಸಾಧ್ಯವಾಗಿಲ್ಲ. ಹೀಗಾಗಿ ಹೆಬ್ಬಾವು ನವಿಲನ್ನು ನುಂಗಲು ಆಗದೆ ಉಗುಳಲೂ ಆಗದೇ ಪರದಾಡುತ್ತಿತ್ತು.ಇದನ್ನು ನೋಡಿದ ಸ್ಥಳೀಯರು ತಕ್ಷಣ ಚಾಮರಾಜನಗರದ ಉರಗ ತಜ್ಞ ಸ್ನೇಕ್ ಚಾಂಪ್ ಅವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಚಾಂಪ್, ಗ್ರಾಮಸ್ಥರ ಸಹಾಯದಿಂದ ಹೆಬ್ಬಾವಿನ ಬಾಯಲ್ಲಿ ಸಿಕ್ಕಿದ್ದ ನವಿಲನ್ನು ಹೊರ ತೆಗೆದಿದ್ದಾರೆ. ನಂತರ ಹೆಬ್ಬಾವನ್ನು ಅರಣ್ಯ ಭಾಗದ ಕೆರೆಯ ಬಳಿ ಬಿಟ್ಟಿದ್ದಾರೆ.Sign in to your account
Username or Email Address


Password

 Remember Me


