ಬೆಂಗಳೂರು: ನಗರದ ಉತ್ತರ ವಿಭಾಗದ ಪೊಲೀಸರು ಪುಂಡ ಪೋಕರಿಗಳಿಗೆ ರಾತ್ರೋರಾತ್ರಿ ವಾರ್ನಿಂಗ್ ನೀಡಿದ್ದಾರೆ.ರಸ್ತೆ ಬದಿ ಸಿಗರೇಟ್ ಸೇದಿ, ಮದ್ಯ ಸೇವಿಸಿ ಗುಂಪಾಗಿ ನಿಂತು ಹೆಣ್ಣು ಮಕ್ಕಳನ್ನು ರೇಗಿಸುವ ವ್ಯಕ್ತಿಗಳನ್ನು ಕರೆಸಿ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ನೇತೃತ್ವದಲ್ಲಿ ಎಚ್ಚರಿಕೆ ನೀಡಿದ್ದಾರೆ.ಡಿಸಿಪಿ ಶಶಿಕುಮಾರ್ ಅವರ ಜೊತೆ ಮಲ್ಲೇಶ್ವರಂ ಉಪವಿಭಾಗದ ಎಸಿಪಿ ಧನಂಜಯ್ ಹಾಗೂ ಇನ್ಸ್ ಪೆಕ್ಟರ್ ಭಾಗಿಯಾಗಿದ್ದರು. ಪೊಲೀಸರು ಪುಂಡರನ್ನು ಓಕಳಿಪುರದ ಕಲ್ಯಾಣ ಮಂಟಪವೊಂದಕ್ಕೆ ಕರೆಸಿ ಬುದ್ಧಿವಾದ ಹೇಳಿದ್ದಾರೆ.ಬುದ್ಧಿವಾದ ಹೇಳಿದ ನಂತರ ಗುರುತಿನ ಚೀಟಿ ಪಡೆದು ಅಪರಾಧ ಕೃತ್ಯದಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದ್ದಾರೆ.Sign in to your account
Username or Email Address


Password

 Remember Me


