ಕಾರವಾರ: ಬೈಕ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮತ್ತು ಸಹ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ನಡೆದಿದೆ.ತಾಲೂಕಿ ಹಂದಿಗೋಣ ಬಳಿಯ ಭಗವತಿ ಗ್ಯಾಸ್ ಸೆಂಟರ್ ಬಳಿ ನಡೆದಿದೆ. ಸದಾನಂದ ನಾರಾಯಣ ಮುಕ್ರಿ(21) ಮತ್ತು ವಿನೋದ್ ಲಕ್ಷ್ಮಣ ಮುಕ್ರಿ (22) ಎಂದು ಮೃತ ಬೈಕ್ ಸವಾರರನ್ನು ಗುರುತಿಸಲಾಗಿದೆ.ಲಾರಿ ಅಂಕೋಲ ಮಾರ್ಗವಾಗಿ ಭಟ್ಕಳಕ್ಕೆ ಹೋಗುತ್ತಿತ್ತು. ಈ ವೇಳೆ ಭಗವತಿ ಗ್ಯಾಸ್ ಸೆಂಟರ್ ಬಳಿ ಇಬ್ಬರು ಯುವಕರು ಬೈಕಿನಲ್ಲಿ ಹೋಗುತ್ತಿದ್ದು, ಓವರ್ ಟೆಕ್ ಮಾಡಲು ಹೋಗಿ ಲಾರಿ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಈ ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


