ಬಾಗಲಕೋಟೆ: ಕರ್ತವ್ಯದ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ ಬಾಗಲಕೋಟೆ ಜಿಲ್ಲೆಯ ಸಿಆರ್ ಪಿಎಫ್ ಯೋಧ ನಿಧನರಾದ ಘಟನೆ ಬಿಹಾರದಲ್ಲಿ ನಡೆದಿದೆ.ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಗಿರಿಯಪ್ಪ ರಾಮಣ್ಣ ಕಿರಸೂರ(29) ಎಂಬವರೇ ನಿಧನರಾದ ಯೋಧ. ಇವರು 2012ರಲ್ಲಿ ಸಿಆರ್ ಪಿಎಫ್ ನಲ್ಲಿ ಕಾನ್ಸ್ ಸ್ಟೇಬಲ್ ಆಗಿ ನೇಮಕಗೊಂಡಿದ್ದರು. ಸದ್ಯ ಬಿಹಾರದಲ್ಲಿ ಬಟಾಲಿಯನ್ 224 ನಲ್ಲಿ ಸೇವೆ ಸಲ್ಲಿಸುತ್ತಿದ್ದರು.ಬಿಹಾರದ ಪಾಟ್ನಾದಲ್ಲಿ ವಿಐಪಿಗಳಿಗೆ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಯೋಧ ಗಿರಿಯಪ್ಪ, ಗುರುವಾರ ಆಕಸ್ಮಿಕವಾಗಿ ಗುಂಡು ತಗುಲಿ ನಿಧನರಾಗಿದ್ದಾರೆ. ಕಳೆದ ವರ್ಷ ಏಪ್ರಿಲ್‍ನಲ್ಲಿ ಗಿರಿಯಪ್ಪ ಅವರಿಗೆ ವಿವಾಹವಾಗಿತ್ತು. ಅಲ್ಲದೆ ಕಳೆದ ತಿಂಗಳಷ್ಟೇ ಯೋಧ ಗಿರಿಯಪ್ಪ ಸ್ವಗ್ರಾಮ ಕಮತಗಿಗೆ ಬಂದು ಹೋಗಿದ್ದರು.ಯೋಧನ ಸಾವಿನ ಸುದ್ದಿಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.Sign in to your account
Username or Email Address


Password

 Remember Me


