ಮಂಗಳೂರು: ಜಿಲ್ಲೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಂದು ಕೋಟಿ ರೂಪಾಯಿ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಬ್ಯಾಗಿನಲ್ಲಿ ಹಣದ ಕಂತೆಯನ್ನು ಒಯ್ಯುತ್ತಿದ್ದ ಬೆಂಗಳೂರಿನ ಮಲ್ಲೇಶ್ವರಂ ನಿವಾಸಿ, 56 ವರ್ಷದ ಮಂಜುನಾಥ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಬಂದರು ಠಾಣೆ ಪೊಲೀಸರು ಇಂದು ಬೆಳಗ್ಗೆ ಮಂಗಳೂರಿನ ರಥಬೀದಿ ಪರಿಸರದಲ್ಲಿ ರೌಂಡ್ಸ್ ನಲ್ಲಿದ್ದ ವೇಳೆ ತಪಾಸಣೆ ನಡೆಸಿದಾಗ ನಗದು ಪತ್ತೆಯಾಗಿದೆ.ಜುವೆಲ್ಲರಿ ವಹಿವಾಟಿನಲ್ಲಿ ತೊಡಗಿಸಲು ಹಣ ತರುತ್ತಿದ್ದ ಎನ್ನಲಾಗಿದ್ದು, ಸೂಕ್ತ ದಾಖಲೆಗಳಿಲ್ಲದ ಕಾರಣ ಪೊಲೀಸರು ಜಪ್ತಿ ಮಾಡಿದ್ದಾರೆ. ಮಂಗಳೂರಿನ ಜುವೆಲ್ಲರಿಗಳಲ್ಲಿ ಹವಾಲಾ ಹಣದ ಹೂಡಿಕೆಯಿದ್ದು, ವರ್ಷದ ಹಿಂದೆ ಮೂರು ಕೋಟಿ ನಗದು ತರುತ್ತಿದ್ದಾಗ ವ್ಯಕ್ತಿಯೊಬ್ಬನನ್ನು ತಂಡವೊಂದು ಅಪಹರಿಸಿದ್ದರು.ಮುಂಬೈ ಮತ್ತು ಬೆಂಗಳೂರಿನಿಂದ ಹವಾಲಾ ಹಣ ತಂದು ಇಲ್ಲಿ ಹೂಡಿಕೆ ಮಾಡಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಮಂಜುನಾಥ್ ಹಣ ತರುತ್ತಿದ್ದ ಎನ್ನಲಾಗುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.Sign in to your account
Username or Email Address


Password

 Remember Me


