ತುಮಕೂರು: ಪುರಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಗಾಗಿ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದೆ.17 ನೇ ವಾರ್ಡ್ ನ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯ ಬಿ ಫಾರಂನ್ನು ಇನ್ನೋರ್ವ ಆಕಾಂಕ್ಷಿ ಕಸಿದುಕೊಂಡು ಪರಾರಿಯಾದ ಪರಿಣಾಮ ಮಾರಾಮಾರಿ ನಡೆದಿದೆ.ಆಸ್ಮಾ ಎಂಬವರಿಗೆ ಬಿ ಫಾರಂ ನೀಡಲಾಗಿತ್ತು. ಇದರಿಂದ ಇನ್ನೋರ್ವ ಆಕಾಂಕ್ಷಿ ಸುಲ್ತಾನಾ ಅಸಮಾಧಾನಗೊಂಡಿದ್ದರು. ಆಸ್ಮಾ ನಾಮಪತ್ರ ಸಲ್ಲಿಸಲು ಬಿ ಫಾರಂ ಜೊತೆಗೆ ತಾಲೂಕು ಕಚೇರಿಗೆ ಬರುತ್ತಿರುವಾಗ ದಾರಿ ಮಧ್ಯೆ ಸುಲ್ತಾನಾ ಬೆಂಬಲಿಗರು ಬಿ ಫಾರಂ ಕಸಿದುಕೊಂಡು ಪರಾರಿಯಾಗಿದ್ದಾರೆ.ಪರಿಣಾಮ ತಾಲೂಕು ಕಚೇರಿ ಎದುರು ಜಮಾಯಿಸಿದ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಮಾರಾಮಾರಿ ನಡೆದಿದೆ. ಪರಸ್ಪರ ಅವಾಚ್ಯ ಶಬ್ಧಗಳಿಂದ ನಿಂದಿಸಿಕೊಂಡು ಹೊಡೆದಾಟ ಮಾಡಿಕೊಂಡಿದ್ದಾರೆ. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.Sign in to your account
Username or Email Address


Password

 Remember Me


