ದಾವಣಗೆರೆ: ಚಾಲಕನ ನಿಯಂತ್ರಣ ತಪ್ಪಿ ಕೋಳಿ ತುಂಬಿದ್ದ ಕ್ಯಾಂಟರ್ ಪಲ್ಟಿಯಾದ ಪರಿಣಾಮ ನೂರಾರು ಕೋಳಿಗಳು ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ದ್ಯಾಮೇನಹಳ್ಳಿ ಬಳಿ ನಡೆದಿದೆ.ಆರೀಫ್ ಮತ್ತು ಸಂತೋಷ್ ಎಂಬವರಿಗೆ ಸೇರಿದ ಕೋಳಿಗಳಾಗಿದ್ದು, ಕ್ಯಾಂಟರ್ ಪಲ್ಟಿಯಾಗಿ ಬರೋಬ್ಬರಿ 800 ಕೋಳಿಗಳು ಸಾವನ್ನಪ್ಪಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಕ್ಯಾಂಟರ್ ನಲ್ಲಿ ಕೋಳಿ ತುಂಬಿಕೊಂಡು ದಾವಣಗೆರೆಯಿಂದ ದ್ಯಾಮೇನಹಳ್ಳಿಯಲ್ಲಿರುವ ಕೋಳಿ ಫಾರ್ಮ್ ಹೌಸ್‍ಗೆ ತೆಗೆದುಕೊಂಡು ಹೋಗಲಾಗುತಿತ್ತು.ಆ ಮಾರ್ಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿಯಾಗಿದೆ. ಆದರೆ ಜನರು ಅಪಘಾತ ನಡೆದಾಗ ರಕ್ಷಣೆ ಮಾಡುವ ಬದಲು ಸತ್ತ ಕೋಳಿಗಳನ್ನು ಬಿಡದೇ ಎರಡು-ಮೂರು ಕೋಳಿಗಳನ್ನು ತೆಗೆದುಕೊಂಡು ಹೋಗಿದ್ದಾರೆ.ಈ ಘಟನೆ ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.Sign in to your account
Username or Email Address


Password

 Remember Me


