ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಇಲ್ಲಿ ಆಗಸದಲ್ಲಿ ಸಾಹಸ ಮಾಡಿದ್ದಾರೆ.ಸದ್ಯ ದಕ್ಷಿಣ ಅಮೆರಿಕದಲ್ಲಿ ಕುಟುಂಬಸ್ಥರೊಂದಿಗೆ ಪುನಿತ್ ರಾಜ್‍ಕುಮಾರ್ ಬೇಸಿಗೆ ರಜೆ ಕಳೆಯುತ್ತಿದ್ದಾರೆ. ಈ ವೇಳೆ ದಕ್ಷಿಣ ಅಮೇರಿಕಾದ ಪ್ರಸಿದ್ಧ ಪ್ರವಾಸಿ ತಾಣಗಳನ್ನು ನೋಡುತ್ತಾ ಹಾಲಿಡೇ ಸಂಭ್ರಮದಲ್ಲಿದ್ದಾರೆ.ಈ ಪ್ರವಾಸದ ವೇಳೆ ಪುನೀತ್ ರಾಜ್‍ಕುಮಾರ್ ಸ್ಕೈ ಡೈವಿಂಗ್ ಮಾಡಿದ್ದು, ಈ ರೋಮಾಂಚನ ಸಾಹಸದ ದೃಶ್ಯಗಳನ್ನು ಪಿಆರ್‌ಕೆ ಸ್ಟೂಡಿಯೋ ಅಧಿಕೃತ ಯೂ ಟ್ಯೂಬ್ ಚಾನೆಲಿನಲ್ಲಿ ಅಪ್ಲೋಡ್ ಆಗಿದೆ.ಪುನೀತ್ ಸ್ಕೈ ಡೈವಿಂಗ್ ದೃಶ್ಯಗಳು, ಬೋಟಿಂಗ್, ಜಲಪಾತ, ದಕ್ಷಿಣ ಅಮೇರಿಕದ ಸುಂದರ ಪ್ರಕೃತಿಯ ಚಿತ್ರಣಗಳು ಸೆರೆಯಾಗಿದೆ.ದಕ್ಷಿಣ ಅಮೇರಿಕಾದ ಭೇಟಿಯ ಕೆಲವು ಅತ್ಯುತ್ತಮ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಇಷ್ಟಪಡುತ್ತೇನೆ. ಈ ವಿಡಿಯೋ ವೀಕ್ಷಿಸಿ ಮತ್ತು ಆನಂದಿಸಿ ಎಂದು ಕ್ಯಾಪ್ಷನ್ ಕೂಡ ಹಾಕಲಾಗಿದೆ.Sign in to your account
Username or Email Address


Password

 Remember Me


