ಉಡುಪಿ: ದೇಸಿ ಸ್ಟೈಲ್‍ನಲ್ಲಿ ಹಾಡು ಹೇಳಿ ಜನರನ್ನು ಮೋಡಿ ಮಾಡಿರುವ ಹನುಮಂತ ಮತ್ತೆ ಸುದ್ದಿಯಾಗ್ತಿದ್ದಾನೆ. ಏಕೆಂದರೆ ನಮ್ ಹನುಮಣ್ಣನ ಜೀವನಗಾಥೆ ಸಿನಿಮಾ ಆಗುತ್ತಿದೆ.ಉಡುಪಿ ಜಿಲ್ಲೆ ಕುಂದಾಪುರದ ಸಂದೇಶ್ ಶೆಟ್ಟಿ ಆಜ್ರಿ ಹನುಮಂತನ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ‘ಕತ್ತಲೆ ಕೋಣೆ’ ಎಂಬ ಹಾರರ್ ಕಂ ಸಸ್ಪೆನ್ಸ್ ಮೂವಿ ನಿರ್ದೇಶನ ಮಾಡಿದ್ದ ಸಂದೇಶ್ ಶೆಟ್ಟಿ ಹನುಮನ ಚರಿತ್ರೆ ಬರೆಯೋಕೆ ಶುರು ಮಾಡಿದ್ದಾರೆ.ಸ್ವತಃ ಹನುಮಂತಣ್ಣನ ಜೊತೆ ಒಂದು ಸಿಟ್ಟಿಂಗ್ ಆಗಿದೆ. ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ. ಒಂದೂವರೆ ಕೋಟಿ ಬಜೆಟ್‍ನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ. ತಸ್ಮಯ್ ಪ್ರೊಡಕ್ಷನ್ ನಂಬರ್ 2 ಬ್ಯಾನರ್ ಅಡಿಯಲ್ಲಿ ಇಸ್ರೇಲ್‍ನಲ್ಲಿ ಉದ್ಯೋಗಿಯಾಗಿರುವ ಪ್ರವೀಣ್ ಮತ್ತು ಪವಿತ್ರ ದಂಪತಿ ಈ ಚಿತ್ರಕ್ಕೆ ದುಡ್ಡು ಹಾಕುತ್ತಿದ್ದಾರೆ.ಈ ಮಳೆಗಾಲ ಮುಗಿದ ಕೂಡಲೇ ಶೂಟಿಂಗ್ ಶುರುವಾಗುತ್ತೆ. ಹನುಮಂತನ ಹುಟ್ಟಿನಿಂದ ‘ಸರಿಗಮಪ’ ರಿಯಾಲಿಟಿ ಶೋದಲ್ಲಿ ಸ್ಟಾರ್ ಆಗುವವರೆಗೂ ಆ ನಂತರದ ಬದುಕು ಚಿತ್ರಕಥೆ ಆಗುತ್ತಿದೆ. ಹನುಮಂತನ ಊರು ಹಾವೇರಿಯ ಸುತ್ತಮುತ್ತಲೇ ಶೂಟಿಂಗ್ ನಡೆಯುತ್ತೆ. ಚಿತ್ರಕ್ಕೆ ಟೈಟಲ್ ಇನ್ನೂ ಫೈನಲ್ ಆಗಿಲ್ಲ. ಒಟ್ಟಿನಲ್ಲಿ ಹನುಮಂತ ಬೆಳ್ಳಿತೆರೆ ಮೇಲೆ ಸಿನಿಮಾ ಆಗಿ ಬರುತ್ತಿದ್ದಾನೆ.Sign in to your account
Username or Email Address


Password

 Remember Me


