ಹುಬ್ಬಳ್ಳಿ: ಮಾಜಿ ಸಿಎಂ ದೇವರಾಜ್ ಅರಸ್ ಅವರ ನಂತರ ರಾಜ್ಯಕ್ಕೆ ಉತ್ತಮ ಆಡಳಿತ ನೀಡಿದ ವ್ಯಕ್ತಿ ಅಂದರೆ ಅದು ಸಿದ್ದರಾಮಯ್ಯ ಎಂದು ಮಾಜಿ ಸಚಿವ ಎಚ್ ಸಿ ಮಹದೇವಪ್ಪ ಹಾಡಿ ಹೊಗಳಿದ್ದಾರೆ.ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ದೇವರಾಜ್ ಅರಸ್ ಅವರ ನಂತರ ಉತ್ತಮ ಆಡಳಿತ ಮಾಡಿದ ವ್ಯಕ್ತಿ. ಅಭಿವೃದ್ಧಿ ಪರವಾದ ಆಡಳಿತ ಕೊಟ್ಟದ್ದಾರೆ ಎಂದರು.ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ, ಆದರೆ ಜನರ ಮನಸ್ಸಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಅವರು ಮುಖ್ಯಮಂತ್ರಿ ಅಲ್ಲದಿದ್ದರೂ ಜನರಿಗೆ ಮಾತ್ರ ಮುಖ್ಯಮಂತ್ರಿಯೇ. ದೋಸ್ತಿ ಸರ್ಕಾರದ ಎರಡು ಪಕ್ಷದ ವರಿಷ್ಠರು ಸೇರಿ ಈಗಾಗಲೇ ಮುಖ್ಯಮಂತ್ರಿ ಅವರನ್ನ ನೇಮಕ ಮಾಡಿದ್ದಾರೆ. ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಇಲ್ಲ, ದಲಿತರು ಮುಖ್ಯಮಂತ್ರಿ ಆಗಬೇಕೆಂಬ ಕೂಗೂ ಇದೆ. ಹೀಗಾಗಿ ದಲಿತ ಮುಖಂಡರಿಗೆ ಸಿಎಂ ಆಗುವ ಅವಕಾಶ ಸಿಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಸಿದ್ದರಾಮಯ್ಯ ಬಗ್ಗೆ ಜೆಡಿಎಸ್ ನಾಯಕ ವಿಶ್ವನಾಥ್ ಮಾತನಾಡಿರುವ ಬಗ್ಗೆ ಪ್ರತಿಕ್ರಯಿಸಿ, ಗುಣಕ್ಕೆ ಮತ್ಸರ ಪಡೋರು ಲೀಡರ್ ಅಲ್ಲ, ಸಾರ್ವಜನಿಕ ಸ್ಥಳದಲ್ಲಿ ಬದುಕಲು ಅರ್ಹರಲ್ಲ ಎಂದು ಹೇಳಿ ಟಾಂಗ್ ನೀಡಿದರು.Sign in to your account
Username or Email Address


Password

 Remember Me


