ಕಲಬುರಗಿ: ಯಮ ಬಂದು ಹಗ್ಗ ಹಾಕಿ ಜಗ್ಗಿದರೂ ನಾನು ಹೋಗಲ್ಲ, ಕೋಲಿ ಸಮಾಜವನ್ನು ಎಸ್‍ಟಿ ವರ್ಗಕ್ಕೆ ಸೇರಿಸಿ ಮತ್ತೆ ಬರುತ್ತೇನೆ ಎನ್ನುತ್ತೇನೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.ಚಿಂಚೋಳಿ ಪಟ್ಟಣದಲ್ಲಿ ಬಿಜೆಪಿ ಆಯೋಜನೆಯ ಕೋಲಿ ಸಮಾಜದ ಸಮಾವೇಶದಲ್ಲಿ ಬಾಬುರಾವ್ ಚಿಂಚನಸೂರ್ ಭಾಗಿಯಾಗಿದ್ದರು. ಈ ವೇಳೆ ನಾನು ಸುಮ್ಮನೆ ಸಾಯುವುದಿಲ್ಲ. ಯಮ ಕರೆದರೂ ನಾನು ಕೋಲಿ ಸಮಾಜವನ್ನು ಎಸ್‍ಟಿ ವರ್ಗಕ್ಕೆ ಸೇರಿಸಿಯೇ ಹೋಗುತ್ತೇನೆ ಎಂದರು. ಕೋಲಿ ಸಮಾಜವನ್ನು ಎಸ್‍ಟಿ ಮಾಡಿದರೆ ತಮ್ಮ ಸಮಾನಾಂತರ ಆಗುತ್ತಾರೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೋಲಿ ಸಮಾಜದ ತಲೆ ಮೇಲೆ ಕಾಲಿಟ್ಟರು. ಹಾಗೆಯೇ ಇವನು ದಿನ ದಿನಾ ಸ್ಟ್ರಾಂಗ್ ಆಗುತ್ತಾನೆ. ನಾನು ಪ್ರತಿದಿನ ಶೈನ್ ಆಗುತ್ತೇನೆ ಎಂದು ನನ್ನ ಮಂತ್ರಿ ಪದವಿಯಿಂದ ತೆಗೆದರು ಎಂದು ಆರೋಪಿಸಿದರು.ಕಲಬುರಗಿಯಲ್ಲಿ ಸಮಾವೇಶಕ್ಕೆ ಪ್ರಧಾನಿಯವರು ಬಂದಿದ್ದಾಗ ನಾನು ಅವರ ಕಾಲಿಗೆ ಬಿದ್ದಾಗ ‘ಕೋಲಿ ಸಮಾಜ್ ಕೋ ಮಹಾನ್ ನಾಯಕ್ ಮಿಲಾ’ ನನ್ನ ಕಿವಿಯಲ್ಲಿ ಹೇಳಿದ್ದರು ಎಂದು ತಿಳಿಸಿದರು. ಅಷ್ಟೇ ಅಲ್ಲದೆ ಕೋಲಿ ಸಮಾಜದವರು ಸ್ವಾಭಿಮಾನಿಗಳು, ಮಾರಾಟವಾಗುವವರಲ್ಲ. ನನಗಂತೂ ಮಕ್ಕಳಿಲ್ಲ, ಅವಿನಾಶ್ ಜಾಧವ್‍ನನ್ನು ನನ್ನ ದತ್ತು ಪುತ್ರ ಎಂದು ತಿಳಿದು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.Sign in to your account
Username or Email Address


Password

 Remember Me


