ಬೆಂಗಳೂರು: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದಿದ್ದು, ಇದೀಗ ನಾಲ್ಕು ದಿನಗಳ ನಂತರ ಪೊಲೀಸರಿಗೆ ಪತಿಯ ಶವ ಪತ್ತೆಯಾಗಿದೆ.ಶ್ರೀನಿವಾಸ್(30) ಕೊಲೆಯಾದ ವ್ಯಕ್ತಿ. ಪತ್ನಿ ಪ್ರತಿಭಾ ತನ್ನ ಪ್ರಿಯಕರನ ಬಾಲಕೃಷ್ಣನ ಜೊತೆ ಸೇರಿಕೊಂಡು ಕೊಲೆ ಮಾಡಿ ಕಲ್ಲು ಕಟ್ಟಿ  ಶವವನ್ನು ಕೆರೆಗೆ ಎಸೆದಿದ್ದರು. ನಾಲ್ಕು ದಿನಗಳ ಹಿಂದೆ ಈ ಕೃತ್ಯ ನಡೆದಿದ್ದು, ಮಂಗಳವಾರ ಕೆರೆಯಲ್ಲಿ ಶವ ಪತ್ತೆಯಾಗಿದೆ. ಇದನ್ನೂ ಓದಿ: ಪತ್ನಿಯ ಕಾಮದಾಟ ಕಣ್ಣಾರೆ ಕಂಡು ಕೊಲೆಯಾದಪ್ರತಿಭಾ ಮತ್ತು ಪ್ರಿಯಕರ ಬಾಲಕೃಷ್ಣ ಶನಿವಾರ ಚಾಕುವಿನಿಂದ ಇರಿದು ಕೊಲೆ ಮಾಡಿ ಶವಕ್ಕೆ ಕಲ್ಲುಕಟ್ಟಿ ಬೊಮ್ಮಸಂದ್ರ ಕೆರೆಗೆ ಎಸೆದಿದ್ದರು. ಈ ಸಂಬಂಧ ಶ್ರೀನಿವಾಸ್ ಕಡೆಯವರು ದೂರು ನೀಡಿದ್ದು, ದೂರು ನೀಡಿದ ಕೇವಲ 8 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದರು. ರಾತ್ರಿ ಆರೋಪಿಗಳೊಂದಿಗೆ ಶವ ಹುಡುಕಲು ಪೊಲೀಸರು ತೆರಳಿದ್ದರು.ಕತ್ತಲಾದ್ದರಿಂದ ಹುಡುಕಾಟ ನಿಲ್ಲಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಶವ ನೀರಿನಲ್ಲಿ ತೇಲಿ ಬಂದಿದೆ. ವಿಷಯ ತಿಳಿದ ಸೂರ್ಯಸಿಟಿ ಪೊಲೀಸರು ಸ್ಥಳಕ್ಕೆ ತೆರಳಿ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.Sign in to your account
Username or Email Address


Password

 Remember Me


