ಹುಬ್ಬಳ್ಳಿ: ಮೊದಲು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಬೇಕು. ಅವರ ತಲೆ ಕೆಟ್ಟಿದೆ ಎಂದು ಸಚಿವ ಜಮೀರ್ ಅಹ್ಮದ್ ತಿರುಗೇಟು ನೀಡಿದ್ದಾರೆ.ಜಮೀರ್ ಅವರನ್ನು ನಿಮ್ಹಾನ್ಸ್ ಆಸ್ಪತ್ರೆ ಸೇರಿಸಬೇಕೆಂಬ ಎಂದು ಶೋಭಾ ಕರಂದ್ಲಾಜೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಮೊದಲು ಶೋಭಕ್ಕನನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಬೇಕು. ಅವರ ತಲೆ ಕೆಟ್ಟು ಹೋಗಿದೆ. ಅವರಿಗೇನಾಗಿದೆ? ಅವರು ಶಾಸಕರಾಗಿ ಇಲ್ಲಿ ಇರಬೇಕಾಗಿತ್ತು. ಆದರೆ ಕೇಂದ್ರಕ್ಕೆ ಹೋಗಿರುವುದರಿಂದ ಅವರ ತಲೆ ಕೆಟ್ಟಿದೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ:ಸಚಿವ ಜಮೀರ್ ತಲೆಕೆಟ್ಟಿದೆ, ನಿಮ್ಹಾನ್ಸ್ ಆಸ್ಪತ್ರೆ ಸೇರಿಸಬೇಕು: ಕರಂದ್ಲಾಜೆ ಕಿಡಿಜಮೀರ್ ಹಿಂಗೆ ಹೇಳಿದರು ಹಂಗೆ ಹೇಳಿದರು ಎಂದು ನಿನ್ನೆ ಶೋಭಕ್ಕ ಹೇಳಿದ್ದಾರೆ. ಕುಮಾರಸ್ವಾಮಿ ಸಿಎಂ ಆದರೆ ತಲೆ ಬೋಳಿಸಿಕೊಳ್ತೀನಿ ಎಂದು ಪೊಳ್ಳು ಹೇಳಿಕೆ ಕೊಡುತ್ತೇನೆ ಎಂದು ಆರೋಪಿಸಿದ್ದಾರೆ. ಯಾವತ್ತು ಮಾತಿನ ಪ್ರಕಾರ ನಡೆದುಕೊಳ್ಳುವುದಿಲ್ಲ ಎಂದಿದ್ದಾರೆ. ಹೀಗಾಗಿ ಶೋಭಾ ಅವರಿಗೆ ಒಂದು ಮಾತು ಹೇಳಲು ಇಷ್ಟ ಪಡುತ್ತೇನೆ. ನಾನು ಅವತ್ತು ಹೇಳಿದ್ದು ನಿಜ. ಅವರಿಗೆ 113 ಸೀಟ್ ಬರಲ್ಲ, ಸಂಪೂರ್ಣ ಬಹುಮತ ಬಂದು ಕುಮಾರಸ್ವಾಮಿ ಅವರು ಸಿಎಂ ಆದರೆ ಒಂದು ಕಡೆ ತಲೆ ಹಾಗೂ ಮೀಸೆ ಬೋಳಿಸಿಕೊಂಡು ಒಂದು ತಿಂಗಳು ಹಾಗೆ ಇರುತ್ತೇನೆ ಎಂದು ಹೇಳಿದ್ದೆ. ಆದ್ರೆ ಅದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.Sign in to your account
Username or Email Address


Password

 Remember Me


