ಮೈಸೂರು: ಮನೆಯ ಬಾಗಿಲ ಮೇಲೆ ನೇತಾಡುತ್ತಿದ್ದ ನಾಗರಹಾವೊಂದನ್ನು ಕಂಡು ಮನೆಯವರೆನ್ನೆಲ್ಲ ಗಾಬರಿಗೊಂಡ ಘಟನೆ ಮೈಸೂರಿನ ಶ್ರೀರಾಂಪುರದಲ್ಲಿ ನಡೆದಿದೆ.ಶ್ರೀರಾಂಪುರದ ನಿವಾಸಿ ನಾಗೇಂದ್ರ ಅವರ ಮನೆಯ ಬಾಗಿಲ ಮೇಲೆ ನಾಗರಹಾವು ಪ್ರತ್ಯಕ್ಷವಾಗಿತ್ತು. ಇದನ್ನು ಕಂಡು ಭಯಗೊಂಡ ಮನೆಯವರು ತಕ್ಷಣ ಮನೆಯಿಂದ ಹೊರ ಓಡಿಬಂದಿದ್ದಾರೆ. ಅಲ್ಲದೆ ಮನೆಯ ಬಾಗಿಲ ಮೇಲೆ ಆರಾಮಾಗಿ ಮಲಗಿದ್ದ ಹಾವಿನ ಬಗ್ಗೆ ಉರಗ ತಜ್ಞರಿಗೆ ಮಾಹಿತಿ ತಿಳಿಸಿದ್ದಾರೆ. ಇದನ್ನೂ ಓದಿ:ವಿಡಿಯೋ: ಮೊಟ್ಟೆಯಿಂದ ಹೊರಬರ್ತಿದ್ದಂತೆ ಹೆಡೆಯೆತ್ತುತ್ತಿವೆ 16 ನಾಗರ ಹಾವಿನ ಮರಿಗಳು!ತಕ್ಷಣ ಉರಗ ತಜ್ಞ ಕೆಂಪರಾಜು ಅವರು ಸ್ಥಳಕ್ಕೆ ಆಗಮಿಸಿ, ಸುಮಾರು ಎರಡೂವರೆ ಅಡಿ ಉದ್ದದ ನಾಗರಹಾವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.Sign in to your account
Username or Email Address


Password

 Remember Me


