ಬೆಂಗಳೂರು: ಪ್ರತಿಯೊಬ್ಬರಿಗೂ ತಾವು ಮಾಡುವ ಕೆಲಸ ಕಾರ್ಯಗಳ ಮೇಲೆ ಅಪಾರ ಭರವಸೆ ಇರುತ್ತದೆ. ಅದೇ ರೀತಿ ತನ್ನ ಪ್ರೀತಿಯ ಮೇಲೆ ಅಪಾರ ಭರವಸೆ ಇಟ್ಟುಕೊಂಡಿರುವ ನಾಯಕನಿಗೆ ಆತನ ಪ್ರೀತಿ, ಸಿಗುತ್ತಾ, ಇಲ್ವಾ ಎಂಬ ಕಥೆಯನ್ನಿಟ್ಟುಕೊಂಡು ತಯಾರಾಗಿರುವ ಚಿತ್ರ ‘ಭರವಸೆ’. ಒಬ್ಬ ಕಲಾವಿದನಾಗಬೇಕೆಂದು ಚಿತ್ರರಂಗಕ್ಕೆ ಕಾಲಿಟ್ಟಿದ್ದ ಮುತ್ತು ಎ.ಎನ್. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಭರವಸೆ ಚಿತ್ರದ ಚಿತ್ರೀಕರಣ ಈಗಾಗಲೇ ಸಂಪೂರ್ಣಗೊಂಡಿದೆ.ಶಿವಮೊಗ್ಗ, ಬೆಂಗಳೂರು, ಸಕಲೇಶಪುರ, ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿರುವ ಈ ಚಿತ್ರದಲ್ಲಿ ಒಟ್ಟು 5 ಹಾಡುಗಳಿದ್ದು ಪ್ರತಿಯೊಬ್ಬರ ಜೀವನದಲ್ಲಿ ಏನಾದರೊಂದು ಭರವಸೆ ಇಟ್ಟುಕೊಂಡಿರುತ್ತಾರೆ. ಅಂತದೇ ಒಂದು ವಿಶೇಷ ಕಥೆ ಈ ಚಿತ್ರದಲ್ಲಿರುತ್ತದೆ.ಆರ್.ಆರ್. ಮೂವಿ ಮೇಕರ್ಸ್ ಲಾಂಛನದಲ್ಲಿ ನಾಗರಾಜು ಬಿ.ಸಿ. ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವೀನಸ್ ಮೂರ್ತಿ ಛಾಯಾಗ್ರಹಣ, ಹರ್ಷ ಕೋಗೋಡು ಸಂಗೀತ, ಶ್ರೀತೇಜ, ಅಭಿಜಿತ್ ತೀರ್ಥಹಳ್ಳಿ, ಭೈರೇಶ್ ಸಾಹಿತ್ಯ, ಸ್ಟಂಟ್ ಸಿದ್ದು ಸಾಹಸ, ಕುಮಾರ್ ಸಿ.ಹೆಚ್. ಸಂಕಲನ, ಅರುಣ್, ಬಾಲು, ಕರಿಯನಂದ ನೃತ್ಯ ನಿರ್ದೇಶನ, ಪಲ್ಲವಿ ಗೋಪಾಲ್ ಸಹ ನಿರ್ಮಾಪಕರಾಗಿದ್ದು ವಿನಯರಾಜ್, ಅಹಲ್ಯಾ ಸುರೇಶ್, ಅಮೃತಾ, ನಾಗರಾಜು, ಶಾಮ್ ಯು. ಪೈ, ಸಂತೋಷ್, ಶೋಭರಾಜ್, ಹೊನ್ನವಳ್ಳಿ ಕೃಷ್ಣ, ಕಿಲ್ಲರ್ ವೆಂಕಟೇಶ್, ಕೆಂಪೇಗೌಡ, ಇನ್ನೂ ಮುಂತಾದವರ ತಾರಾಬಳಗವಿದೆ.Sign in to your account
Username or Email Address


Password

 Remember Me


