ಬೆಂಗಳೂರು: ನಿಹಾರಿಕಾ ಮೂವೀಸ್ ಲಾಂಛನದಲ್ಲಿ ಶ್ರೀಹರಿ ನಿರ್ಮಿಸಿರುವ ‘ಮೌನಂ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ- ರಾಜ್ ಪಂಡಿತ್, ಛಾಯಾಗ್ರಹಣ – ಶಂಕರ್, ಸಂಗೀತ – ಆರವ್ ರಿಶಿಕ್, ಸಂಕಲನ – ಗುರುಮೂರ್ತಿ ಹೆಗಡೆ, ಸಾಹಸ – ಕೌರವ ವೆಂಕಟೇಶ್, ಅಲ್ಟಿಮೇಟ್ ಶಿವು, ಸಾಹಿತ್ಯ – ಆಕಾಶ್ ಎಸ್., ಸಹ ನಿರ್ದೇಶಕರು- ರಿತೇಶ್, ಗುಣವಂತ ಮಂಜು, ತಾರಾಗಣದಲ್ಲಿ – ಅವಿನಾಶ್, ಮಯೂರಿ (ಕೃಷ್ಣಲೀಲಾ), ಬಾಲಾಜಿ ಶರ್ಮ (ಅಮೃತವರ್ಷಿಣಿ ಖ್ಯಾತಿ), ಹನುಮಂತೇಗೌಡ, ರಿತೇಶ್, ಕೆಂಪೇಗೌಡ, ಗುಣವಂತ ಮಂಜು, ನಯನ (ಕಾಮಿಡಿ ಕಿಲಾಡಿಗಳು), ಸಿಂಚನ, ಮಂಜುಳಾ ರೆಡ್ಡಿ, ಮುಂತಾದವರಿದ್ದಾರೆ.ಚಿತ್ರದಲ್ಲಿ ಹಿರಿಯ ನಟ ಅವಿನಾಶ್ ಅವರು ತಮ್ಮ 35 ವರ್ಷಗಳ ವೃತ್ತಿ ಬದುಕಿನಲ್ಲಿ ಅತ್ಯಂತ ವಿಶಿಷ್ಟವಾದ ಸುಮಾರು 6 ಶೇಡ್‍ಗಳಿರುವ ಪಾತ್ರದಲಿ ಅಭಿನಯಿಸಿದ್ದಾರೆ. ಮಯೂರಿ ಅವರು ಹೋಮಿ ಮತ್ತು ಆಕ್ಷನ್ ಸೀಕ್ವೆನ್ಸ್‍ಗಳಲ್ಲಿ ಮಿಂಚಿದ್ದಾರೆ. ಮನುಷ್ಯನಿಗೆ ಮನುಷ್ಯನೇ ಶತ್ರು, ನಾವೇ ನಮ್ಮ ಹೊರಗಡೆ ಇರುವ ಶತ್ರುವನ್ನು ಮಟ್ಟಹಾಕುವ ಮೊದಲು ನಮ್ಮ ಒಳಗಡೆ ಇರುವ ಶತ್ರುವನ್ನು ಮಟ್ಟಹಾಕಬೇಕು ಅನ್ನೋದು ಚಿತ್ರದ ಕಥೆಯ ತಿರುಳು ಎಂಬುದು ಚಿತ್ರತಂಡದ ಮಾತು.Sign in to your account
Username or Email Address


Password

 Remember Me


