ಬೀದರ್: ಹನಿ ನೀರಿಗಾಗಿ ಎಲ್ಲೆಡೆ ಹಾಹಾಕಾರ ಎದುರಾಗಿದೆ. ಈ ನಡುವೆ ಗ್ರಾಮಕ್ಕೆ ಬೋರ್‌ವೆಲ್‌ ರೀ-ಬೋಟಿಂಗ್ ಮಾಡಲು ಬಂದು ನೀರು ಸಿಗದೇ ವಿಫಲವಾದ ಬೋರ್‌ವೆಲ್‌ ಗಾಡಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಟ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.ಬೋರ್ ರೀ-ಬೋಟಿಂಗ್ ಗೆ ಚಟ್ನಹಳ್ಳಿ ಗ್ರಾಮಕ್ಕೆ ಬೋರ್ ವೇಲ್ ಗಾಡಿಯೊಂದು ಬಂದಿತ್ತು. ಆದರೆ ರೀ-ಬೋಟಿಂಗ್ ಮಾಡಿದರು ಬೋರ್ ನಲ್ಲಿ ಹನಿ ನೀರು ಕೂಡ ಸಿಗಲಿಲ್ಲ. ಆದ್ದರಿಂದ ಬಂದ ಕೆಲಸ ವಿಫಲವಾದರಿಂದ ಬೋರ್‌ವೆಲ್‌ ಗಾಡಿ ವಾಪಾಸ್ ಹೊರಟಿತ್ತು. ಆದರೆ ಈ ವೇಳೆ ಏಕಾಏಕಿ ಗ್ರಾಮಸ್ಥರು ಗಾಡಿಯನ್ನು ಮುತ್ತಿಗೆ ಹಾಕಿ ಹೊಸ ಬೋರ್‌ವೆಲ್‌ ಕೊರೆಸಿ, ಬಳಿಕ ಗ್ರಾಮದಿಂದ ಹೋಗಿ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.ನೀರಿನ ಸಮಸ್ಯೆಯಿಂದ ಕೆಂಗೆಟ್ಟಿದ್ದ ಗ್ರಾಮಸ್ಥರು ಈ ರೀತಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಗ್ರಾಮದಲ್ಲಿ ಒಂದೇ ಬೋರ್‌ವೆಲ್‌ ಇದ್ದ ಕಾರಣ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಇತ್ತ ಜಿಲ್ಲಾಡಳಿತ ವತಿಯಿಂದ ಅಧಿಕಾರಿಗಳು ಬೋರ್‌ವೆಲ್‌ ರೀ ಬೋಟಿಂಗ್ ಕಳಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಹೊಸ ಬೋರ್‌ವೆಲ್‌ ಕೊರೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.Sign in to your account
Username or Email Address


Password

 Remember Me


