ಬೆಂಗಳೂರು: ಮದುವೆಯಾಗಿದ್ದ ವ್ಯಕ್ತಿಯ ಜೊತೆ ಮಗಳು ಓಡಿ ಹೋಗಿದ್ದಕ್ಕೆ ಮನನೊಂದ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಸಂಜಯ್ ನಗರದ ನಿವಾಸಿ ರಾಮು ಆತ್ಮಹತ್ಯೆ ಮಾಡಿಕೊಂಡ ತಂದೆ. ಈ ಘಟನೆ ಏಪ್ರಿಲ್ 30 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ರಿಹಾನ ಮತ್ತು ರಾಮು ದಂಪತಿಯ ಎರಡನೇ ಮಗಳು ವೇದಾವತಿ ವಿವಾಹಿತ ಉದಯ್‍ನನ್ನ ಪ್ರೀತಿಸಿ ಓಡಿ ಹೋಗಿ ಮದುವೆ ಆಗಿದ್ದಾಳೆ. ಮನೆಗೆ ಆಗಾಗ ಬಂದು ಹೋಗುತ್ತಿದ್ದ ಉದಯ್ ಮಗಳೊಂದಿಗೆ ಸ್ನೇಹ ಬೆಳಸಿ ಅವಳನ್ನು ಪಟಾಯಿಸಿ ಕರೆದುಕೊಂಡು ಹೋಗಿದ್ದಾನೆ. ಈ ವಿಷಯವನ್ನು ತಿಳಿಯದ ಪೋಷಕರು ಮನೆ ಬಿಟ್ಟ ಮಗಳಿಗಾಗಿ ಎರಡು ದಿನ ಕಾದಿದ್ದಾರೆ. ನಂತರ ರಾಮು ಅವರ ಮನೆಗೆ ಬಂದ ಉದಯ್‍ನ ಮೊದಲ ಪತ್ನಿ ನನ್ನ ಗಂಡನ ಜೊತೆ ನಿಮ್ಮ ಮಗಳು ಓಡಿಹೋಗಿದ್ದಾಳೆ ಎಂದು ಪೋಷಕರಿಗೆ ವಿಷಯ ಮುಟ್ಟಿಸಿದ್ದಾಳೆ. ಇದರಿಂದ ಮನನೊಂದ ಹುಡುಗಿಯ ತಂದೆ ರಾಮು ಬಾತ್‍ರೂಮಿನಲ್ಲಿ ತಂತಿಯನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಸಂಬಂಧ ನಂದಿನಿ ಲೇಔಟ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.Sign in to your account
Username or Email Address


Password

 Remember Me


