ಮಂಡ್ಯ: ಬೈಕ್ ಮತ್ತು ಕೆಎಸ್‌ಆರ್‌ಟಿಸಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಾಧುಗೋನಹಳ್ಳಿ ಬಳಿ ನಡೆದಿದೆ.ಕೆ.ಆರ್.ಪೇಟೆ ನಿವಾಸಿ ತಾಯಿ ಜಯಮ್ಮ, ಮಗ ಕೃಷ್ಣ ಮತ್ತು ಸೊಸೆ ಗೌರಿ ಮೃತ ದುರ್ದೈವಿಗಳು. ಬಸ್ ಹೇಮಗಿರಿಯಿಂದ ಕೆ.ಆರ್.ಪೇಟೆ ಕಡೆ ಬರುತ್ತಿತ್ತು. ಇತ್ತ ಮೂವರು ಬೈಕಿನಲ್ಲಿ ಬಂಡಿಹೊಳೆ ಸಮೀಪದ ಚಂದಗೋನಹಳ್ಳಿಯಮ್ಮ ದೇವಸ್ಥಾನಕ್ಕೆ ಹೋಗುತ್ತಿದ್ದರು. ಈ ವೇಳೆ ಸಾಧುಗೋನಹಳ್ಳಿ ಬಳಿ ಬಸ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಬೈಕಿನಲ್ಲಿದ್ದ ಮೂವರ ತಲೆಗೆ ಪೆಟ್ಟಾಗಿದ್ದು, ಪರಿಣಾಮ ಒಂದೇ ಕುಟುಂಬದವರು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಕುರಿತು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


