ಬೆಂಗಳೂರು: ಇಬ್ಬರು ಸ್ಟಾರ್ ನಟರ ಚಿತ್ರಗಳು ಒಂದೇ ದಿನ ತೆರೆ ಕಾಣುವಂಥಾ ಅಪರೂಪದ ವಾತಾವರಣ ಆಗಾಗ ಸೃಷ್ಟಿಯಾಗುತ್ತಿರುತ್ತದೆ. ಕೆಲ ಸಂದರ್ಭದಲ್ಲಿದ್ದು ಸ್ಟಾರ್ ವಾರ್ ಸ್ವರೂಪ ಪಡೆದುಕೊಂಡರೆ, ಮತ್ತೆ ಕೆಲ ಘಳಿಗೆಗಳಲ್ಲಿ ಆರೋಗ್ಯವಂತ ಸ್ಪರ್ಧೆಗೂ ಅನುವು ಮಾಡಿ ಕೊಡುತ್ತದೆ. ಅಂಥಾದ್ದೇ ಒಂದು ಆರೋಗ್ಯಕರ ಕದನಕ್ಕೆ ಜೂನ್ 14ರಂದು ಮುಹೂರ್ತ ನಿಗದಿಯಾಗಿದೆ!ಜೂನ್ ಹದಿನಾಲಕ್ಕರಂದು ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐ ಲವ್ ಯೂ ಚಿತ್ರ ಬಿಡುಗಡೆಯಾಗುತ್ತಿರೋದು ಗೊತ್ತೇ ಇದೆ. ಆರ್ ಚಂದ್ರು ನಿರ್ದೇಶನದ ಈ ಚಿತ್ರ ಈಗಾಗಲೇ ಒಂದಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಇದನ್ನು ಕಣ್ತುಂಬಿಕೊಳ್ಳಲು ಉಪ್ಪಿ ಅಭಿಮಾನಿಗಳೆಲ್ಲ ಕಾತರರಾಗಿದ್ದಾರೆ. ಇದೀಗ ಅದೇ ದಿನ ಶಿವಣ್ಣನ ರುಸ್ತುಂ ಚಿತ್ರವೂ ಬಿಡುಗಡೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಅಷ್ಟಕ್ಕೂ ರುಸ್ತುಂ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಗಳೇ ಇವೆ. ಸಾಹಸ ನಿರ್ದೇಶಕರಾಗಿದ್ದ ರವಿವರ್ಮ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇದರಲ್ಲಿ ಶಿವಣ್ಣನ ಪಾತ್ರ, ಉಳಿಕೆ ತಾರಾಗಣವೆಲ್ಲವೂ ಡಿಫರೆಂಟಾಗಿಯೇ ಇದೆ. ರಚಿತಾ ರಾಮ್, ಮಯೂರಿ, ಸೋನು ಗೌಡ ನಾಯಕಿಯರಾಗಿ ನಟಿಸಿದ್ದಾರೆ. ಶಿವಣ್ಣನ ವೃತ್ತಿಜೀವನದ ವಿಶಿಷ್ಟವಾದ ಚಿತ್ರವಾಗಿ ರುಸ್ತುಂ ನೆಲೆಯಾಗಲಿದೆ ಎಂಬ ಮಾತುಗಳೂ ಇವೆ. ಹೀಗೆ ಉಪೇಂದ್ರ ಮತ್ತು ಶಿವರಾಜ್ ಕುಮಾರ್ ಅವರ ಬಹು ನಿರೀಕ್ಷಿತ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿವೆ ಎಂದರೆ ಯಾರಿಗಾದರೂ ಕುತೂಹಲ ಇದ್ದೇ ಇರುತ್ತೆ.ಉಪೇಂದ್ರ ಮತ್ತು ಶಿವಣ್ಣ ಸ್ಯಾಂಡಲ್ ವುಡ್‍ನ ಜೀವದ ಗೆಳೆಯರು. ಉಪೇಂದ್ರ ಅವರಂತೂ ಶಿವಣ್ಣ ಏನಾದರೂ ಹುಡುಗಿಯಾಗಿದ್ದರೆ ಪ್ರಪೋಸ್ ಮಾಡಿ ಮದುವೆಯಾಗಿ ಬಿಡುವಂಥಾ ಮಾತುಗಳನ್ನು ಬಹಿರಂಗವಾಗಿಯೇ ಹೇಳಿದ್ದರು. ಶಿವಣ್ಣನ ಮೇಲೆ ಅಂಥಾ ಪ್ರೀತಿ ಇಟ್ಟುಕೊಂಡಿರೋ ಉಪ್ಪಿ ಅವರ ಚಿತ್ರದೊಟ್ಟಿಗೇ ತಮ್ಮ ಚಿತ್ರವೂ ಬಿಡುಗಡೆಯಾಗುತ್ತಿರೋದರ ಬಗ್ಗೆ ಥ್ರಿಲ್ ಆಗಿದ್ದಾರಂತೆ.Sign in to your account
Username or Email Address


Password

 Remember Me


