ಕೊಪ್ಪಳ: ಚಹಾ ಮಾಡುವ ವೇಳೆ ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ರಾಯರೆಡ್ಡಿ ಕಾಲೋನಿಯಲ್ಲಿ ನಡೆದಿದೆ.ಸಿಲಿಂಡರ್ ಸ್ಫೋಟದ ರಭಸಕ್ಕೆ ಮನೆಯ ಮೇಲ್ಛಾವಣಿ ಕಿತ್ತು ಹಾರಿ ಹೋಗಿದೆ. ಅಲ್ಲದೆ ಮನೆಯ ಸಾಮಾನುಗಳು ಪುಡಿ ಪುಡಿ ಆಗಿವೆ. ಮನೆಯಲ್ಲಿದ್ದ ರಾಜಮ್ಮ ಷಯದಸಾಬ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ರಾಜಮ್ಮ ಚಹಾ ಮಾಡುತ್ತಿದ್ದ ವೇಳೆಯಲ್ಲಿ ಸಿಲಿಂಡರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ರಾಜಮ್ಮ ಹೊರಗಡೆ ಬಂದಿದ್ದಾರೆ. ರಾಜಮ್ಮ ಹೊರಬರುತ್ತಲೇ ಸಿಲಿಂಡರ್ ಸ್ಫೋಟಗೊಂಡಿದೆ. ಸಿಲಿಂಡರ್ ಸ್ಫೋಟದ ರಭಸಕ್ಕೆ ರಾಜಮ್ಮ ಗಾಯಗೊಂಡಿದ್ದಾರೆ.ಗಾಯಾಳು ರಾಜಮ್ಮರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.Sign in to your account
Username or Email Address


Password

 Remember Me


