ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತನಿಂದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಕಾಂಗ್ರೆಸ್ ಕಾರ್ಯಕರ್ತ ಮಂಜು ಅಲಿಯಾಸ್ ಮಂಜುನಾಥ್ ಹಲ್ಲೆ ನಡೆಸಿದ್ದಾನೆ. ತಂದೆ ಮಂಜು ನೀಚ ಕೆಲಸಕ್ಕೆ ಮಗ ಕಿರಣ್ ಕುಮಾರ್ ಸಾಥ್ ನೀಡಿದ್ದಾನೆ. ರಿಯಲ್ ಎಸ್ಟೇಟ್ ಉದ್ಯಮಿ ಮಲ್ಲಿಕಾರ್ಜುನ್ ಮೇಲೆ ಹಲ್ಲೆ ಮಾಡಿ ಕಿಡ್ನ್ಯಾಪ್ ಗೆ ಯತ್ನಿಸಲಾಗಿದೆ.ಕಳೆದ 7ರಂದು ಬೆಂಗಳೂರಿನ ಬಿಟಿಎಂ ಲೇಔಟ್‍ನ ಕೃಷ್ಣ ಭವನ್ ಹೋಟೆಲ್ ಬಳಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ವೇಳೆ ತಕ್ಷಣ ಮಲ್ಲಿಕಾರ್ಜುನ್ ಮೈಕೋ ಲೇಔಟ್ ಠಾಣೆಗೆ ಕರೆ ಮಾಡಿದ್ದಾರೆ. ಹೊಯ್ಸಳ ಸಿಬ್ಬಂದಿ ಸ್ಥಳಕ್ಕಾಗಮಿಸಿದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.ಕಾರು ಹಾಗೂ ಬೈಕ್‍ನಲ್ಲಿ ಬಂದ ಏಳೆಂಟು ಜನ ಸಹಚರರಿಂದ ಕಿಡ್ನ್ಯಾಪ್‍ಗೆ ಯತ್ನ ನಡೆದಿದೆ. ಹಣಕಾಸು ವಿಚಾರಕ್ಕಾಗಿ ಹಲ್ಲೆ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಗಲಾಟೆಯ ಸಂಪೂರ್ಣ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.Sign in to your account
Username or Email Address


Password

 Remember Me


