ಚಿತ್ರದುರ್ಗ: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯನ್ನು ಬರ್ಬರವಾಗಿ ಕೊಲೆಗೈದು ಶವವನ್ನು ಚೀಲದಲ್ಲಿ ತುಂಬಿ ಬಿಸಾಡಿದ್ದ ಪ್ರಕರಣವನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಗ್ರಾಮಾಂತರ ಠಾಣೆ ಪೋಲಿಸರು ಭೇದಿಸಿದ್ದಾರೆ.ರೇಷ್ಮಾ(28) ಮೃತ ಮಹಿಳೆ. ಮೇ 5ರಂದು ರೇಷ್ಮಾ ಶವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಗಿಡ್ಡೋಬನಹಳ್ಳಿಯ ಸೇತುವೆ ಬಳಿ ಚೀಲದಲ್ಲಿ ಪತ್ತೆಯಾಗಿತ್ತು. ಹೀಗಾಗಿ ಈ ಹತ್ಯೆ ಪ್ರಕರಣವನ್ನು ಬೆನ್ನತ್ತಿದ್ದ ಹಿರಿಯೂರು ಠಾಣೆಯ ಪಿಎಸ್‍ಐ ಚನ್ನೇಗೌಡ ಹಾಗೂ ಪೋಲೀಸರ ತಂಡ ಕೃತ್ಯದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.    ಸಹೋದರ ಸಾದಿಕ್                                     ಮಾವ ಮೊಹಿನುದ್ದೀನ್                              ಅಳಿಯ ನೂರ್ಈ ಕೃತ್ಯವನ್ನು ರೇಷ್ಮಾಳ ಪತಿ ಇಬ್ರಾಹಿಂ ಹಾಗೂ ಕುಟುಂಬಸ್ಥರು ಮಾಡಿದ್ದಾರೆಂಬ ಆರೋಪ ಕೇಳಿಬಂದಿದ್ದು, ಆರೋಪಿಗಳಾದ ಇಬ್ರಾಹಿಂ ಸೇರಿದಂತೆ ಮಾವ ಮೊಹಿನುದ್ದೀನ್, ಅತ್ತೆ ಮುನಿರಾ, ಇಬ್ರಾಹಿಂ ಸಹೋದರ ಸಾದಿಕ್, ಅಳಿಯ ನೂರ್ ಮತ್ತು ನೂರ್ ಪತ್ನಿ ಯಾಸ್ಮೀನ್ ಆರು ಜನರನ್ನ ಪೋಲಿಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.ಮೃತ ರೇಷ್ಮಾಳ ಪತಿ ಇಬ್ರಾಹಿಂ ಬೇರೆ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದನು. ಈ ಬಗ್ಗೆ ಪತ್ನಿ ರೇಷ್ಮಾ ತಿಳಿದು ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ ತನ್ನ ಕುಟುಂಬಸ್ಥರ ಜೊತೆ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಪ್ರಕರಣ ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.                                   ಯಾಸ್ಮೀನ್                                                                       ಅತ್ತೆ ಮುನಿರಾSign in to your account
Username or Email Address


Password

 Remember Me


