ಕಲಬುರಗಿ: ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದ್ದಕ್ಕೆ ಜಾಧವ್ ಮಗಳು ಫೇಲ್ ಆಗಿದ್ದಾಳೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.ಮಗಳು ಪಿಯುಸಿ ಫೇಲ್ ಆಗಲು ಕಾಂಗ್ರೆಸ್ ಕಾರಣ ಎಂದಿದ್ದ ಜಾಧವ್ ಹೇಳಿಕೆಗೆ ಚಿಂಚೋಳಿಯಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಜಾಧವ್ ತಮ್ಮ ಮಗಳು ಫೇಲ್ ಆಗಿದ್ದಕ್ಕೆ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ. ಇದನ್ನು ಕೇಳಿ ನನಗೆ ಆಶ್ವರ್ಯವಾಯಿತು. ಜಾಧವ್ ಮಾತು ಜೋಕ್ ಆಫ್ ದಿ ಈಯರ್. ಕಾಂಗ್ರೆಸ್ ಬಿಟ್ಟು ತಂದೆ ಬಿಜೆಪಿಗೆ ಹೋಗಿದ್ದಕ್ಕೆ ನೊಂದು ಅವರ ಮಗಳು ಫೇಲಾಗಿದ್ದಾಳೆ. ಅನುಕಂಪ ಬರಲಿ ಅಂತ ಜಾಧವ್ ಆ ರೀತಿ ಹೇಳಿರಬಹುದು. ಆದರೆ ಇದಕ್ಕೆ ಅನುಕಂಪ ಬರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.ನಾನು ನಮ್ಮಪ್ಪನ ಹಣದಿಂದ ಸಾಲಮನ್ನಾ ಮಾಡಿರಲಿಲ್ಲ. ಕೆರೆಯ ನೀರನ್ನು ಕೆರೆಗೆ ಚೆಲ್ಲಿದಾಗೆ ಜನರ ದುಡ್ಡನ್ನು ಅವರಿಗೆ ಕೊಟ್ಟಿದ್ದೇವೆ. ಅದು ಸಾರ್ವಜನಿಕರ ಹಣವಾಗಿದೆ. ರೈತರು ಸಾಲದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರು ಕಷ್ಟದಲ್ಲಿದ್ದಾಗ ಅವರ ಹಣದಿಂದಲೇ ಸಾಲಮನ್ನಾ ಮಾಡಿದ್ದೇವೆ ಎಂದರು.ಜಾಧವ್ ಹೇಳಿದ್ದೇನು?
ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಉಮೇಶ್ ಜಾಧವ್, ರಾಜಕೀಯ ಗೊಂದಲ ಶುರುವಾಗುವ ಮೊದಲೇ ಪ್ರಿಯಾಂಕ್ ಖರ್ಗೆ ಅವರು ಡಾ.ಉಮೇಶ್ ಜಾಧವ್ ಅವರನ್ನು ಕಾಂಗ್ರೆಸ್ಸಿನಿಂದ ಓಡಿಸಬೇಕು ಎಂದು ಹುನ್ನಾರ ಮಾಡಿಕೊಂಡಿದ್ದರು. ಹಣ ತೆಗೆದುಕೊಂಡಿದ್ದೇನೆ ಎಂದು ದಿನವೂ ಸುಳ್ಳು ಆರೋಪ ಮಾಡುತ್ತಿದ್ದಾರೆ. ಹೀಗಾಗಿ ನನ್ನ ಮಗಳು ಪಿಯುಸಿ ಪರೀಕ್ಷೆ ಬರೆಯಲು ಹೋದಾಗ ಶಿಕ್ಷಕರೊಬ್ಬರು, ಇವರ ಅಪ್ಪ ಮಾರಾಟವಾಗಿದ್ದಾನೆ ಎಂದು ಹೇಳಿದ್ದರು. ಇದರಿಂದ ನೊಂದ ಮಗಳು ಪರೀಕ್ಷೆ ಬರೆಯದೇ ಅಳುತ್ತಾ ಮನೆಗೆ ಬಂದು ಮಾತ್ರೆ ಸೇವಿಸಿ ಆತ್ಮಹತ್ಯೆಗೂ ಮುಂದಾಗಿದ್ದಳು. ಹೀಗಾಗಿ ಕಾಂಗ್ರೆಸ್ ಆರೋಪದಿಂದ ನನ್ನ ಮಗಳು ಫೇಲಾಗಿದ್ದಾಳೆ ಎಂದು ಉಮೇಶ್ ಜಾಧವ್ ಆರೋಪಿಸಿದ್ದರು.Sign in to your account
Username or Email Address


Password

 Remember Me


