ಬೆಂಗಳೂರು: ಮನೆ ಬಾಡಿಗೆ ನೀಡದೇ ಮಾಲೀಕನ ಜೊತೆ ಗಲಾಟೆ ಮಾಡಿದ್ದಕ್ಕೆ ಸ್ಯಾಂಡಲ್‍ವುಡ್ ನಟ ಆದಿತ್ಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ನಟ ಆದಿತ್ಯ, ಸದಾಶಿವನಗರದ ಆರ್‍ಎಂವಿ ಎಕ್ಷಟೆನ್ಷನ್‍ನಲ್ಲಿರುವ ಪ್ರಸನ್ನ ಅವರ ಬಾಡಿಗೆ ಮನೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಸವಾಗಿದ್ದಾರೆ. ಆದರೆ ಕಳೆದ ಏಳು ತಿಂಗಳಿಂದ ಬಾಡಿಗೆ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿದಕ್ಕೆ ಮನೆ ಮಾಲೀಕರಾದ ಪ್ರಸನ್ನ ಜೊತೆ ಜಗಳವಾಡಿದ್ದಾರೆ.ಆದಿತ್ಯ ಅವರ ಜೊತೆ ಅವರ ತಂದೆ ರಾಜೇಂದ್ರ ಸಿಂಗ್ ಬಾಬು, ತಂಗಿ ಹಾಗೂ ತಾಯಿ ಮನೆಯಲ್ಲಿ ವಾಸಿಸುತ್ತಿದ್ದಾರೆ. ನಾಲ್ಕು ವರ್ಷದ ಹಿಂದೆ ತಿಂಗಳಿಗೆ 40 ಸಾವಿರ ರೂ. ನಂತೆ ಬಾಡಿಗೆಗೆ ನೀಡಲಾಗಿತ್ತು. ಬಳಿಕ ಈಗ ಮನೆ ಮಾಲೀಕರು 48 ಸಾವಿರ ಬಾಡಿಗೆಗೆ ಏರಿಸಿದ್ದಾರೆ. ಆದಿತ್ಯ ಇದುವರೆಗೆ 2 ಲಕ್ಷ 88 ಸಾವಿರ ಹಣ ಬಾಕಿ ನೀಡಬೇಕಿದೆ.ಕಳೆದ ನಾಲ್ಕು ವರ್ಷಗಳಿಂದ ಆದಿತ್ಯ ಕುಟುಂಬ ಇದೇ ಮನೆಯಲ್ಲಿ ವಾಸವಾಗಿದ್ದಾರೆ. ಆದರೆ ಕಳೆದ ಏಳು ತಿಂಗಳಿಂದ ಬಾಡಿಗೆ ನೀಡಿರಲಿಲ್ಲ. ಈ ವಿಚಾರವಾಗಿ ಮನೆ ಮಾಲೀಕ ಕೆಲ ಕಳೆದ ನವೆಂಬರ್ ನಲ್ಲಿ ಕೋರ್ಟ್ ಗೆ ಎವಿಕ್ಷನ್ ಕೇಸ್ ದಾಖಲಿಸಿದ್ದರು. ಸದ್ಯ ಇಂದು ಮನೆ ಖಾಲಿ ಮಾಡಿಸಿ ಕೊಡುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.ಆದಿತ್ಯ ಮನೆ ಮಾಲೀಕ ಪ್ರಸನ್ನಗೆ ಬೈದಿರುವ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.Sign in to your account
Username or Email Address


Password

 Remember Me


