ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಸರ್ವಮಂಗಳ ಮಾಂಗಲ್ಯೇ’ ಧಾರಾವಾಹಿ ಖ್ಯಾತಿಯ ನಟಿ ಐಶ್ವರ್ಯಾ ಪಿಸ್ಸೆ ಅವರ ನಿಶ್ಚಿತಾರ್ಥ ಇತ್ತೀಚೆಗಷ್ಟೆ ನೆರವೇರಿದೆ.ನಟಿ ಐಶ್ವರ್ಯಾ ಅವರು ತಮ್ಮ ಬಹುಕಾಲದ ಗೆಳೆಯ ಹರಿ ವಿನಯ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇವರಿಬ್ಬರು ಕುಟುಂಬದವರ ಸಮ್ಮುಖದಲ್ಲಿ ರಿಂಗ್ ಬದಲಾಯಿಸುವ ಮೂಲಕ ಎಂಗೇಜ್ ಆಗಿದ್ದಾರೆ. ಈ ಕಾರ್ಯಕ್ರಮಕ್ಕೆ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರು ಬಂದು ಜೋಡಿಗೆ ಶುಭಕೋರಿದ್ದಾರೆ.ನಟಿ ಐಶ್ವರ್ಯ ಅವರು ‘ಸರ್ವಮಂಗಳ ಮಾಂಗಲ್ಯೇ’ ಧಾರಾವಾಹಿಯಲ್ಲಿ ಪಾರ್ವತಿ ಎಂಬ ಪಾತ್ರ ಮಾಡುತ್ತಿದ್ದು, ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ನಟ ಚಂದನ್ ಕುಮಾರ್ ಸಹ ಈ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ.ಅಷ್ಟೇ ಅಲ್ಲದೇ ಐಶ್ವರ್ಯ ಯಶ್ ಅಭಿನಯದ ‘ಸಂತು ಸ್ಟ್ರೈಟ್ ಫಾರ್ವಡ್’ ಸಿನಿಮಾದಲ್ಲಿ ಯಶ್ ಅವರಿಗೆ ಸಹೋದರಿಯಾಗಿ ಕಾಣಿಸಿಕೊಂಡಿದ್ದರು. ಸದ್ಯಕ್ಕೆ ಅವರು ಕನ್ನಡ ಮತ್ತು ತೆಲುಗು ಎರಡೂ ಭಾಷೆಯ ಸೀರಿಯಲ್ ಅಭಿನಯಿಸುತ್ತಿದ್ದಾರೆ.Sign in to your account
Username or Email Address


Password

 Remember Me


