ಬೆಂಗಳೂರು: ‘ಬಿಗ್ ಬಾಸ್’ ಖ್ಯಾತಿಯ ನಟ ಚಂದನ್ ಕುಮಾರ್ ಅವರು ಪೋಸ್ಟ್ ಮಾಡಿರುವ ಫೋಟೋ ನೋಡಿ ಅಭಿಮಾನಿಗಳು ಕನ್ ಫ್ಯೂಸ್ ಆಗಿದ್ದಾರೆ.ಚಂದನ್ ಇನ್ ಸ್ಟಾಗ್ರಾಂನಲ್ಲಿ ಒಂದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ನಟಿ ಆಯೇಶಾ ಜೊತೆ ಮದುವೆ ಆಗಿರುವ ರೀತಿಯಲ್ಲಿ ಚಂದನ್ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ.ನಟ ಚಂದನ್ ತೆಲುಗಿನ ‘ಸಾವಿತ್ರಮ್ಮಗಾರಿ ಅಬ್ಬಾಯಿ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಈ ಸೀರಿಯಲ್‍ನಲ್ಲಿ ಚಂದನ್‍ಗೆ ಜೋಡಿಯಾಗಿ ನಟಿ ಆಯೇಶಾ ನಟಿಸುತ್ತಿದ್ದಾರೆ. ಹೀಗಾಗಿ ಈ ಧಾರಾವಾಹಿಯಲ್ಲಿ ಇವರಿಬ್ಬರು ಗಂಡ-ಹೆಂಡತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಂದನ್ ಫೋಟೋಗೆ ‘ಸಾವಿತ್ರಮ್ಮಗಾರಿ ಅಬ್ಬಾಯಿ’ ಧಾರಾವಾಹಿಯ ಮೊದಲ ಫೋಟೋ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.ಚಂದನ್ ಫೋಟೋ ಪೋಸ್ಟ್ ಮಾಡಿದ ತಕ್ಷಣ ಅಭಿಮಾನಿಗಳು ಸೂಪರ್ ಜೋಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಚಂದನ್ ‘ಪ್ರೇಮ ಬರಹ’ ಸಿನಿಮಾದಲ್ಲಿ ಅಭಿನಯಿಸಿದ್ದು, ಬಳಿಕ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಚಂದನ್ ‘ಕುರುಕ್ಷೇತ್ರ’ದಲ್ಲಿ ಸಹದೇವನ ಪಾತ್ರ ಮಾಡಿದ್ದು, ಸಿನಿಮಾ ಬಿಡುಗಡೆಯಾಗಬೇಕಿದೆ.https://www.instagram.com/p/BxPjT7MgXqe/Sign in to your account
Username or Email Address


Password

 Remember Me


