ಮಂಡ್ಯ: ಎರಡು ಕುಟುಂಬಗಳ ನಡುವೆ ಜಮೀನು ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ತಡೆಯಲು ಯತ್ನಿಸಿದ ವ್ಯಕ್ತಿಯೇ ಪೆಟ್ಟು ತಿಂದು ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲೂಕಿನ ಬಿ. ಹಟ್ನ ಗ್ರಾಮದಲ್ಲಿ ನಡೆದಿದೆ.ಶಿವರುದ್ರಪ್ಪ ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಇಂದು ಸಂಜೆ ವೇಳೆ ಘಟನೆ ನಡೆದಿದೆ. ಗ್ರಾಮದ ಸಂಪತ್ ಕುಮಾರ್ ಮತ್ತು ನಾಗರಾಜು ಎಂಬವರ ಕುಟುಂಬದ ನಡುವೆ ಜಮೀನು ವಿಚಾರದಲ್ಲಿ ಗಲಾಟೆ ನಡೆಯುತ್ತಿತ್ತು. ಎರಡು ಕುಟುಂಬಗಳ ಜಮೀನು ಪಕ್ಕದಲ್ಲೇ ಮೃತ ಶಿವರುದ್ರಪ್ಪ ಅವರ ಜಮೀನು ಕೂಡ ಇದೆ.ಎರಡು ಕುಟುಂಬಳ ಜಗಳ ಮೀತಿ ಮೀರಿ ಮಾರಕಾಸ್ತ್ರಗಳಿಂದ ಹಲ್ಲೆಯವರೆಗೂ ಬೆಳೆಯುತ್ತಿದದ್ದನ್ನು ಕಂಡ ಶಿವರುದ್ರಪ್ಪ ಅವರು ಗಲಾಟೆ ತಡೆಯಲು ಯತ್ನಿಸಿದ್ದರು. ಆ ಹಂತದಲ್ಲಿ ಶಿವರುದ್ರಪ್ಪ ಅವರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆದಿದೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಜಗಳ ಮಾಡುತ್ತಿದ್ದ ಎರಡು ಕುಟುಂಬಗಳ ಸದಸ್ಯರು ಕೂಡ ಗಾಯಗೊಂಡಿದ್ದು, ಗಾಯಾಳುಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಘಟನೆ ಕುರಿತು ಮಾಹಿತಿ ಪಡೆದ ಶಿವಳ್ಳಿ ಪೊಲೀಸ್ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.Sign in to your account
Username or Email Address


Password

 Remember Me


