ಮಂಡ್ಯ: ಓವರ್ ಹೆಡ್ ಟ್ಯಾಂಕ್ ಶುದ್ಧೀಕರಣಕ್ಕೆ ಇಳಿದಿದ್ದ ವ್ಯಕ್ತಿ ಮೃತಪಟ್ಟ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೊಗರಳ್ಳಿ ಗ್ರಾಮದಲ್ಲಿ ನಡೆದಿದೆ.ಮೈಸೂರು ಮೂಲದ ದೇವರಾಜು (33) ಮೃತ ದುರ್ದೈವಿ. ದೇವರಾಜು ಮೊಗರಳ್ಳಿ ಗ್ರಾಮದ ಓವರ್ ಟ್ಯಾಂಕ್ ಶುದ್ಧೀಕರಣ ಮಾಡಲು ಟ್ಯಾಂಕ್ ಒಳಗೆ ಇಳಿದಿದ್ದಾಗ ಮೃತಪಟ್ಟಿದ್ದಾರೆ.ಟ್ಯಾಂಕ್ ಪಕ್ಕದಲ್ಲಿಯೇ ಇದ್ದ ಕಂಬದಿಂದ ವಿದ್ಯುತ್ ಪ್ರವಹಿಸಿದ ಪರಿಣಾಮ ದೇವರಾಜು ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕ್ರೇನ್ ಸಹಾಯದಿಂದ ದೇವರಾಜು ಮೃತ ದೇಹವನ್ನು ಹೊರತೆಗೆದಿದ್ದಾರೆ.ದೇವರಾಜು ಮೃತದೇವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೆ.ಆರ್.ಎಸ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.Sign in to your account
Username or Email Address


Password

 Remember Me


