ಬೀದರ್: ನಾಗಮಂಗಲ ಗಲಭೆ ಪ್ರಕರಣದಲ್ಲಿ (Nagamangala Violence) ಮೊದಲೇ ಕ್ಲೀನ್‌ಚಿಟ್ ನೀಡಿದ ಗೃಹ ಸಚಿವರು ಹಾಗೂ ಸರ್ಕಾರದ ವಿರುದ್ಧ ಪರಿಷತ್ ವಿರೋಧ ಪಕ್ಷದ ನಾಯಕ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.ಇದನ್ನೂ ಓದಿ: ಮೊದಲ ಬಾರಿಗೆ ಮಗನ ಮುಖ ರಿವೀಲ್ ಮಾಡಿದ ‘ಹೆಬ್ಬುಲಿ’ ನಟಿ ಅಮಲಾನಗರದಲ್ಲಿ ಮಾತನಾಡಿದ ಅವರು, ಪಿಎಸ್‌ಐ ಪರಶುರಾಮ ಪ್ರಕಣದಲ್ಲೂ ಗೃಹ ಸಚಿವ ಪರಮೇಶ್ವರ ಮೊದಲೇ ಕ್ಲೀನ್‌ಚಿಟ್ ನೀಡಿದ್ದು, ಅದು ಏನು ಆಗಿಲ್ಲಾ ಆತ್ಮಹತ್ಯೆ ಅಷ್ಟೇ ಎಂದರು. ವಾಲ್ಮೀಕಿ ನಿಗಮ ಹಗರಣದಲ್ಲಿ ಕಿಂಗ್‌ಪಿನ್ ನಾಗೇಂದ್ರ ಅಂಥಾ ಆದ್ರೆ ಈ ಹೆಸರುಗಳು ಐಎಸ್ ಐಟಿಯಲ್ಲಿ ಇರಲ್ಲಾ ಎಂದು ಇಡಿಯವರು ಹೇಳುತ್ತಾರೆ. ಹೀಗಾಗಿ ಅವರ ಶಾಸಕರಿಗೆ ಹಾಗೂ ಮಂತ್ರಿಗಳಿಗೆ ಕ್ಲೀನ್‌ಚಿಟ್ ಕೊಡಲು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದಾರೆ. 20ಕ್ಕೂ ಅಧಿಕ ಅಂಗಡಿಗಳು ಅನ್ಯಕೋಮಿನ ಜನರು ಸುಟ್ಟಾಕಿದ್ದಾರೆ. ಇದನ್ನು ನೋಡಿದರೆ ಗೊತ್ತಾಗುತ್ತದೆ. ಈ ಪ್ರಕರಣಕ್ಕೆ ಕೇರಳದವರ ಲಿಂಕ್ ಇದೆ ಎಂದಿದ್ದಾರೆ.ಅಲ್ಲಿ ಬಾಂಗ್ಲಾದೇಶದವರು ನೆಲಿಸಿದ್ದು, ಎಸ್‌ಡಿಪಿಐನವರ ಕಾರ್ಯ ಶಾಲೆಗಳು ನಡೆಯುತ್ತಿದ್ದು, ಬ್ಯಾನ್ ಮಾಡಿದ ಸಂಸ್ಥೆಗಳು ನಾಗಮಂಗಲ ಗಲಭೆ ಪ್ರಕರಣದಲ್ಲಿ ಬಂದಿದ್ದು ಹೇಗೆ? ಕಾಂಗ್ರೆಸ್ ಸರ್ಕಾರ ಮುಂದುವರೆದರೆ ಈ ದೇಶಕ್ಕೆ ಗಂಡಾಂತರ ಗ್ಯಾರಂಟಿ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಅಗತ್ಯ ಸಿದ್ಧತೆಗೆ ಬೋಸರಾಜು ಸೂಚನೆSign in to your account
Username or Email Address


Password

 Remember Me


