– ತವರಿಗೆ ಮರಳಿದ 6 ಭಾರತೀಯರು; ಉಕ್ರೇನ್‌ ಸೈನ್ಯದಲ್ಲಿ ಬಂಕರ್‌ ಅಗೆಯುವ ಕೆಲಸ ಮಾಡ್ತಿದ್ದ ಯುವಕರುಕಲಬುರಗಿ: ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದ ಕಲಬುರಗಿಯ ಮೂವರು ಯುವಕರು ಭಾರತಕ್ಕೆ ವಾಪಸ್‌ ಆಗಿದ್ದಾರೆ. ಕಲಬುರಗಿ ಮೂಲದ ಮೂವರು ಸೇರಿ 6 ಮಂದಿ ತವರಿಗೆ ಮರಳಿದ್ದಾರೆ.ಕಲಬುರಗಿ ನಗರದ ನೂರಾನಿ ಮೊಹಲ್ಲಾ ನಿವಾಸಿ ಸೈಯದ್ ಇಲಿಯಾಸ್ ಹುಸೇನಿ, ಇಸ್ಲಾಮಾಬಾದ್‌ ಕಾಲೊನಿ ನಿವಾಸಿ ಮಹ್ಮದ್ ಸಮೀರ, ಮಿಜಗುರಿ ಪ್ರದೇಶದ ಮಹ್ಮದ್ ನಯೂಮ್ ವಾಪಸ್ ಆಸ ಯುವಕರು ಭಾರತಕ್ಕೆ ಬಂದಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಉಕ್ರೇನ್‌ಗೆ ಭೇಟಿ ನೀಡಿ ವಾಪಸ್ ಆದ ಕೆಲವೇ ದಿನಗಳಲ್ಲಿ ಭಾರತದ ಯುವಕರು ದೇಶಕ್ಕೆ ಮರಳಿದ್ದಾರೆ. ಮುಂಬೈ ಮೂಲದ ಏಜೆಂಟನೊಬ್ಬ ವೆಬ್‌ಸೈಟ್‌ನಲ್ಲಿ ಪರಿಚಯ ಮಾಡಿಕೊಂಡು ಯುವಕರನ್ನು ಉಕ್ರೇನ್‌ಗೆ ಕರೆಸಿಕೊಂಡಿದ್ದ.ಕೆಲಸ ಕೊಡಿಸುವ ನೆಪದಲ್ಲಿ ಯುವಕರನ್ನು ಉಕ್ರೇನ್‌ಗೆ ಕರೆಸಿಕೊಳ್ಳಲಾಗಿತ್ತು. ಯುದ್ಧ ಭೂಮಿಯಲ್ಲಿ ಯುವಕರನ್ನ ಸೈನ್ಯಕ್ಕೆ ಬಳಸಿಕೊಳ್ಳಲಾಗಿತ್ತು. ಸೈನ್ಯದಲ್ಲಿ ಬಂಕರ್‌ಗಳನ್ನು ಅಗೆಯುವ ಕೆಲಸಕ್ಕೆ ಬಳಸಿಕೊಳ್ಳಲಾಗಿತ್ತು. ಈ ಕುರಿತು ವೀಡಿಯೋ ಮಾಡಿ ಯುವಕರು ಕಷ್ಟ ತೋಡಿಕೊಂಡಿದ್ದರು.ಯುವಕರನ್ನು ಮರಳಿ ತರುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದು ಒತ್ತಾಯಿಸಿದ್ದರು.Sign in to your account
Username or Email Address


Password

 Remember Me


