ಚಿಕ್ಕಮಗಳೂರು: ಕಾರ್ ರ‍್ಯಾಲಿಯಂದರೆ ನಾವು-ನೀವು ಸ್ಪೋರ್ಟ್ಸ್ ಚಾನೆಲ್‍ಗಳಲ್ಲಿ ನೋಡಿರುತ್ತೇವೆ. ಕಾಫಿನಾಡಲ್ಲಿ ನಡೆದ ಕಾರ್ ರ‍್ಯಾಲಿ ಅಷ್ಟೆ ಪ್ರಮಾಣದ ಮನೋರಂಜನೆ ಜೊತೆ ನೋಡುಗರಿಗೆ ಸಖತ್ ಕಿಕ್ ಕೊಟ್ಟಿದೆ. ಒಂದೊಂದು ಕಾರ್ ಧೂಳೆಬ್ಬಿಸ್ತಾ ಹೋದ ಹಾಗೆ ಜನ ಹುಚ್ಚೆದ್ದು ಕುಣಿದಿದ್ದಾರೆ. ರಾಷ್ಟ್ರೀಯ ಮಟ್ಟದ ಡ್ರೈವರ್ ಗಳ ಜೊತೆ ಸ್ಥಳೀಯ ಪ್ರತಿಭೆಗಳು ತೊಡೆ ತಟ್ಟಿದ್ದು ಈ ರ‍್ಯಾಲಿಯ ಮತ್ತೊಂದು ವಿಶೇಷ.ಕಾಫಿ ಡೇ ಗ್ಲೋಬಲ್‍ರವರ ಪ್ರಯೋಜತ್ವದಲ್ಲಿ ಚಿಕ್ಕಮಗಳೂರು ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿರುವ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್ ಶಿಪ್‍ನ ಎಂಆರ್‍ಎಫ್ ಹಾಗೂ ಎಫ್‍ಎಂಎಸ್‍ಸಿಐ ರ‍್ಯಾಲಿ ಇದಾಗಿದೆ. ಏಕ ಕಾಲದಲ್ಲಿ ಮೂರು ವಿಭಾಗಗಳಿಗೆ ನಡೆದ ರ‍್ಯಾಲಿಯಲ್ಲಿ ಹತ್ತಾರು ಕಂಪನಿಯ ಕಾರುಗಳು ಕಮಾಲ್ ಮಾಡಿದವು. ಮಾರುತಿ ಎಸ್ಟೀಮ್, ಮಾರುತಿ ಬೊಲೆರೋ, ಮೀಟ್ಸ್ ಮೀಷನ್, ಓಕ್ಸ್ ಪೋಲೋ, ಓಕ್ಸ್ ವ್ಯಾಗನ್, ಸ್ಕೊಡ ಕಾರುಗಳ ಜೊತೆ ಜಿಪ್ಸಿ ಕೂಡ ಒಂದಕ್ಕೊಂದು ಸೆಡ್ಡು ಹೊಡೆಯುತ್ತಾ ಮುನ್ನುಗಿವೆ. ಮೊದಲ ದಿನದ ಅಂಕಗಳಿಗಾಗಿ ಅಖಾಡಕ್ಕಿಳಿದಿದ್ದ ಕಾರುಗಳು ನೋಡುಗರಿಗೆ ಸಖತ್ ಥ್ರಿಲ್ ನೀಡಿವೆ.ನೋಡುಗರ ಮನೋರಂಜನೆಗಾಗಿ ಸಿದ್ಧಪಡಿಸಿದ್ದ ಟ್ರ್ಯಾಕ್‍ನಲ್ಲಿ ಸ್ಪರ್ಧಾಳುಗಳು ಪ್ರೇಕ್ಷಕರ ಮೈನವಿರೇಳಿಸಿದರು. 2.2 ಕಿ.ಮೀ. ವ್ಯಾಪ್ತಿಯ ಹಾವು-ಬಳುಕಿನ ಮೈಕಟ್ಟಿನ ಮಣ್ಣಿನ ಹಾದಿಯಲ್ಲಿ ಚಾಲಕರ ಧೂಳೆಬ್ಬಿಸ್ತಾ ಓಡಿಸ್ತಿದ್ದ ಕಾರುಗಳು ನೋಡುಗರ ಎದೆ ಮೇಲೆ ಹೋದಂತಿತ್ತು. ಹೆಸರು ನೋಂದಾಯಿಸಿದ್ದ 47 ಸ್ಪರ್ಧಿಗಳಲ್ಲಿ 47 ರೈಡರ್‍ಳು ಕೂಡ ನೋಡುಗರಿಗೆ ಮನೋರಂಜನೆ ನೀಡಿದರು. ಈ ಬಾರಿಯ ರ್ಯಾಲಿಯಲ್ಲಿ ದೆಹಲಿ, ದುಬೈ, ಮಹಾರಾಷ್ಟ್ರ, ಬೆಂಗಳೂರು ಸೇರಿದಂತೆ ದೇಶದ ವಿವಿಧ ರಾಜ್ಯಗಳ ರೈಡರ್ ಗಳಿಗೆ ಚಿಕ್ಕಮಗಳೂರಿನ ಸ್ಥಳೀಯ ಪ್ರತಿಭೆಗಳು ಸೆಡ್ಡು ಹೊಡೆದರು. ಅರುಣಾಚಲ ಪ್ರದೇಶ, ಚೆನ್ನೈ ಹಾಗೂ ಕೊಯಮತ್ತೂರಿನಲ್ಲಿ ರ್ಯಾಲಿ ನಡೆದಿದ್ದು, ನಾಲ್ಕನೇ ಹಂತದಲ್ಲಿ ನಡೆಯುತ್ತಿರುವ ಇಲ್ಲಿನ ಗೆಲುವು ಕಂಡವರು ರ್ಯಾಲಿಯ ಚಾಂಪಿಯನ್ ಆಗುತ್ತಾರೆ.ಪ್ರೇಕ್ಷಕರ ರಂಜನೆಗಾಗಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ರಾಷ್ಟ ಮಟ್ಟದ ಸ್ಫರ್ಧಾಳುಗಳು ಭಾಗವಹಿಸಿ ರೋಚಕ ಪ್ರದರ್ಶನ ನೀಡಿದರು. 150 ರಿಂದ 200 ಕಿ.ಮೀ. ವೇಗದಲ್ಲಿ ಓಡುತ್ತಿರೋ ಕಾರುಗಳನ್ನ ನೋಡಿ ಜನ ಫುಲ್ ಫಿದಾ ಆಗಿದ್ದಾರೆ. ಮೂಡಿಗೆರೆಯ ಚಂದ್ರಾಪುರ, ಕಮ್ಮರಗೋಡು, ಚಟ್ನಹಳ್ಳಿ ಕಾಫಿ ತೋಟಗಳಲ್ಲಿ ಇನ್ನು ಎರಡು ದಿನ ಓಡುವ ಕಾರುಗಳು ನೋಡುಗರಿಗೆ ಮತ್ತಷ್ಟು ಮನೋರಂಜನೆ ನೀಡಲಿದ್ದು, ಜನ ಆ ರಮಣೀಯ ದೃಶ್ಯಗಳನ್ನ ನೋಡೋದಕ್ಕೂ ಕಾತರುರಾಗಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictvSign in to your account
Username or Email Address


Password

 Remember Me


