ಮಂಡ್ಯ: ರೆಬೆಲ್ ಸ್ಟಾರ್ ಮಂಡ್ಯದ ಗಂಡು ನಮಗೆಲ್ಲರಿಗೂ ಈಗ ನೆನಪು ಮಾತ್ರ. ಆದರೆ ಅವರು ಮಾಡಿರುವ ಸಹಾಯ ಎಲ್ಲರಿಗೂ ಕಾಡುತ್ತಿದ್ದು, ಅವರ ಅಭಿಮಾನಿಗಳ ಕಣ್ಣಲ್ಲಿ ಇಂದಿಗೂ ನೀರು ತರಿಸುತ್ತಿದೆ. ಅಂಬಿ ಅವರು ಲೆಕ್ಕವಿಲ್ಲದಷ್ಟು ಸಹಾಯ ಮಾಡಿದ್ದಾರೆ. ಅದರಲ್ಲಿ ಮಹಿಳೆಯೊಬ್ಬರಿಗೆ ಮಾಡಿರುವ ಸಹಾಯ ಅವರನ್ನ ತುಂಬಾ ಕಾಡುತ್ತಿದ್ದು, ನನ್ನ ಪ್ರಾಣ ತಗೊಂಡು ಅಂಬಿ ಅಣ್ಣನ ಪ್ರಾಣ ಉಳಿಸಬೇಕಾಗಿತ್ತು ಅಂತಾ ಕಣ್ಣೀರು ಹಾಕುತ್ತಿದ್ದಾರೆ.ರೆಬೆಲ್ ಸ್ಟಾರ್ ಅಂಬಿ ಅಸಂಖ್ಯಾತ ಅಭಿಮಾನಿಗಳನ್ನು ಅಗಲಿ ಇಂದಿಗೆ ಒಂದು ವಾರ. ಅಂಬಿಯ ಮಾತು ಒರಟಾಗಿದರು, ಮನಸ್ಸು ಮಾತ್ರ ಬೆಣ್ಣೆ. ಅವರು ರಾಜ್ಯಾದ್ಯಂತ ಹಲವಾರು ಅಭಿಮಾನಿಗಳಿಗೆ ಸಹಾಯ ಹಸ್ತ ಚಾಚಿದ್ದಾರೆ. ಕಲಿಯುಗದ ಕರ್ಣನ ಸಹಾಯ ನೆನೆದು ಮಂಡ್ಯ ತಾಲೂಕಿನ ಹನಕೆರೆ ಗ್ರಾಮದ ಪುಷ್ಪಲತಾ ಅವರು ಕಣ್ಣೀರು ಹಾಕುತ್ತಿದ್ದಾರೆ.ಕಾಲು ನೋವಿನಿಂದಾಗಿ ನಡೆಯಲು ಆಗುತ್ತಿರಲಿಲ್ಲ. ನೆಲದಲ್ಲಿ ತೆವಳಿಕೊಂಡು ಓಡಾಡುತ್ತಿದ್ದೆ. ಆಗ ನಮ್ಮೂರಿಗೆ ಆಗಮಿಸಿದ ಅಂಬಿ ಅಣ್ಣ ನನ್ನ ಸ್ಥಿತಿಯನ್ನು ನೋಡಿ ಮರುಗಿ ಅಮೆರಿಕದಿಂದ ಸರ್ಜನ್ ರಾಮಕೃಷ್ಣರವರನ್ನು ಬೆಂಗಳೂರಿಗೆ ಕರೆಸಿ ಚಿಕಿತ್ಸೆ ಕೊಡಿಸಿದರು. ಇಂದು ನಾನು ಓಡಾಡ್ತಿರೋದಕ್ಕೆ ಅಂಬಿಯಣ್ಣ ಕಾರಣ ಅಂತಾ ನೆನೆದು ಕಣ್ಣೀರು ಹಾಕಿದರು.ಅಂಬಿ ಅಣ್ಣನ ಅಗಲಿಕೆಯನ್ನು ನಮ್ಮ ಕೈಯಲ್ಲಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಜನ್ ರಾಮಕೃಷ್ಣ ಅವರನ್ನು ಭೇಟಿ ಮಾಡಲು ವಾರಗಟ್ಟಲೆ ಕಾದು ಅಪಾಯಿಂಟ್ಮೆಂಟ್ ಪಡೆಯಬೇಕು. ಆದರೆ ಅಂಬಿ ಅಣ್ಣನ ಒಂದೇ ಮಾತಿಗೆ ಅವರು ನಮ್ಮ ಮನೆಗೆ ವರ್ಷಕ್ಕೊಮ್ಮೆ ಆಗಮಿಸಿ ನಮ್ಮ ಅತ್ತೆಗೆ ಚಿಕಿತ್ಸೆ ನೀಡಿ ಹೋಗುತ್ತಿದ್ದರು ಎಂದು ಪುಷ್ಪಲತಾ ಸಂಬಂಧಿಕರು ಗದ್ಗದಿತರಾದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictvSign in to your account
Username or Email Address


Password

 Remember Me


