ಬೆಂಗಳೂರು: ನಟ ಅಂಬಿ ಆಗಿನ್ನೂ ಗಾಂಧಿನಗರ ಕಲರ್ ಫುಲ್ ಲೋಕದೊಳಗೆ ಎಂಟ್ರಿ ಕೊಡುವ ಟೈಂ. ಅಷ್ಟೇನೂ ಸಿನಿಮಾ ಕೈ ಹತ್ತಿರಲಿಲ್ಲ. ಅಂಬಿ ಯಾವಾಗ ವಿಠಲ ಮಲ್ಯ ರಸ್ತೆಯ ಈ ವುಡ್ ಲ್ಯಾಂಡ್ ಹೋಟೆಲ್ ನ 412 ನಂಬರ್ ಕೋಣೆ ಪಡೆದು ತಂಗಲು ಶುರುಮಾಡಿದ್ರೋ ಆಗ ಅಂಬಿ ಬದುಕು ಬದಲಾಯ್ತಂತೆ. ಅಂಬಿ ಅಂದು ಜ್ಯೋತಿಷ್ಯರ ಸಲಹೆಯ ಮೇರೆಗೆ ಅದೇ ಕೋಣೆಯಲ್ಲಿ ಫಿಕ್ಸ್ ಆಗಿದ್ದರಂತೆ. ಈ ರೂಂನಲ್ಲಿ ಅಂಬಿ ಬರೋಬ್ಬರಿ ಹದಿನೇಳು ವರ್ಷ ಇದ್ದರು.ಹೋಟೆಲ್ ಸಿಬ್ಬಂದಿ ಅಪ್ಪಿ ತಪ್ಪಿ ಬೇರೆಯವರಿ ಈ ಕೋಣೆ ಕೊಟ್ಟರೆ ಅಂಬರೀಶ್ ಫುಲ್ ಗರಂ ಆಗುತ್ತಿದ್ದರಂತೆ. ನನ್ ಲಕ್ಕಿ ರೂಂ ಕಣ್ರೋ ಯಾಕ್ ಬೇರೆಯವರಿಗೆ ಕೊಟ್ಟಿದ್ರಿ ಅಂತ ಗಲಾಟೆ ಮಾಡುತ್ತಿದ್ರಂತೆ. ಇದರಿಂದ ವುಡ್ ಲ್ಯಾಂಡ್ ಹೋಟೆಲ್ ನಲ್ಲಿ 412. ರೂಂ ಅಂಬಿಗೆ ಫಿಕ್ಸ್ ಆಗಿತ್ತಂತೆ. ಸಿಬ್ಬಂದಿಗಳನ್ನು ಕಂದರೆ ಸಿಕ್ಕಾಪಟ್ಟೆ ಇಷ್ಟಪಡುವ ಅಂಬರೀಶ್ ತಮ್ಮ ಸಿನಿಮಾದ ಟಿಕೆಟ್ ಕೊಟ್ಟು ಫಿಲ್ಮ್ ನೋಡಲು ಕಳುಹಿಸುತ್ತಿದ್ದರು ಎಂದು ಅಲ್ಲಿಯ ಕೆಲಸಗಾರ ಆರುಮುಗಂ ನೆನಪು ಮಾಡಿಕೊಳ್ಳುತ್ತಾರೆ.ಅಂಬರೀಶ್ ಅವರನ್ನು ಭೇಟಿಯಾಗಲು ನಟರಾದ ವಿಷ್ಣುವರ್ಧನ್, ರಜನೀಕಾಂತ್ ಇಲ್ಲಿಗೆ ಬರುತ್ತಿದ್ದರಂತೆ. ದೀಪಾವಳಿ ಬಂದರೆ ಇಲ್ಲಿನ ಸಿಬ್ಬಂದಿಗಳಿಗೆ ಬಟ್ಟೆ ಕೊಟ್ಟು ಖುಷಿ ಪಡುತ್ತಿದ್ದರು. ವುಡ್ ಲ್ಯಾಂಡ್ ಊಟವನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ರಂತೆ. ಹೀಗೆ ಅಂಬಿಯ ನೆನಪಿನ ಲೋಕಕ್ಕೆ ಜಾರಿದ ಹೋಟೆಲ್ ಸಿಬ್ಬಂದಿ ಅಂಬಿ ಆಗಲಿಕೆಗೆ ಭಾವುಕರಾಗಿದ್ದಾರೆ. ಹಳೆಯ ದಿನ ಸೂಪರ್ ಸ್ಟಾರ್ ಆದ್ರೂ ಅದೇ ಪ್ರೀತಿಯ ಪ್ರತಿರೂಪವಾಗಿ ಬದಲಾಗದ ಅಂಬಿ ಇವರ ಪಾಲಿಗೆ ಎಂದೆಂದೂ ಮರೆಯದ ಹೀರೋ ಆಗಿ ಉಳಿಯುತ್ತಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictvSign in to your account
Username or Email Address


Password

 Remember Me


