ಬಾಗಲಕೋಟೆ: ಭೂಕಂಪನ ಆಗದಿದ್ದರೂ ಒಂದೇ ಕುಟುಂಬದ ಏಳು ಮನೆಗಳು ರಾತ್ರೋರಾತ್ರಿ ಬಿರುಕು ಬಿಟ್ಟಿರುವ ಅಚ್ಚರಿಯೊಂದು ಜಿಲ್ಲೆಯ ಕಿರಸೂರು ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.ಕಿರಸೂರು ಗ್ರಾಮದಲ್ಲಿ ಒಂದೇ ಕುಟುಂಬದ ಏಳು ಮನೆಗಳು ಬಿರುಕು ಬಿಟ್ಟಿದೆ. ಯಲ್ಲನಗೌಡ ಕರಿಗೌಡ್ರ, ದ್ಯಾವಪ್ಪ ಕರಿಗೌಡ್ರ, ಶಂಕ್ರಪ್ಪ ಕರಿಗೌಡ್ರ, ಹನುಮಂತ ಆಸಂಗಿ, ರಾಜು ಆಸಂಗಿ, ಸುರೇಶ್ ಕರಿಗೌಡ್ರ, ಹನುಮಂತ ಕರಿಗೌಡ್ರ ಎಂಬುವವರ ಮನೆಗಳು ಹಾನಿಯಾಗಿವೆ. ರಾತ್ರಿ ಎಲ್ಲರು ಮಲಗಿದ್ದ ವೇಳೆ ಈ ಘಟನೆ ಸಂಭವಿಸಿದೆ. ಭೂಕಂಪನ ಆಗದೇ ಇದ್ದಕ್ಕಿದ್ದಂತೆ ಮನೆಗಳು ಬಿರುಕು ಬಿಟ್ಟಿರುವುದನ್ನು ಕಂಡು ಮನೆ ಮಂದಿಯೆಲ್ಲಾ ಎದ್ದು ಹೊರಗೆ ಬಂದಿದ್ದಾರೆ.ರಾತ್ರೋರಾತ್ರಿ ಈ ತರಹ ಮನೆಗಳು ಬಿರುಕು ಬಿಟ್ಟಿರುವುದರಿಂದ ಕಿರಸೂರು ಗ್ರಾಮಸ್ಥರಲ್ಲಿ ಆತಂತ ಸೃಷ್ಟಿಯಾಗಿದೆ. ಅದರಲ್ಲೂ ಒಂದೇ ಕುಟುಂಬದ ಏಳು ಮನೆಗಳು ಬಿಟ್ಟರೆ ಗ್ರಾಮದ ಇನ್ಯಾವ ಮನೆಗಳು ಬಿರುಕು ಬಿಟ್ಟಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.ಸದ್ಯ ಈ ಘಟನೆ ಮನೆಯ ಮಾಲೀಕರಿಗೆ ಹಾಗೂ ಗ್ರಾಮಸ್ಥರಿಗೆ ಅಚ್ಚರಿ ಮೂಡಿಸಿದ್ದು, ಹೀಗೆ ಮನೆಗಳು ಏಕಾಏಕಿ ಬಿರುಕು ಬಿಡಲು ಕಾರಣವೇನು ಎಂದು ಗ್ರಾಮಸ್ಥರು ತಲೆ ಕೆಡಿಸಿಕೊಂಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictvSign in to your account
Username or Email Address


Password

 Remember Me


