ಬೆಂಗಳೂರು: ಕಾಂಗ್ರೆಸ್‍ನ ಕೆಲವು ಪ್ರಭಾವಿ ನಾಯಕರು ನನ್ನ ಹೆಸರನ್ನು ಡ್ಯಾಮೇಜ್ ಮಾಡಲು ಷಡ್ಯಂತ್ರ ನಡೆಸುತ್ತಿದ್ದಾರೆ ಪೌರಾಡಳಿತ, ಬಂದರು ಮತ್ತು ಒಳನಾಡು ಸಾರಿಗೆ ಖಾತೆಯ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಎಲ್ಲೂ ಹೋಗಿಲ್ಲ, ಮುಂಬೈಗೂ ಹೋಗಿಲ್ಲ, ಬೆಂಗಳೂರಲ್ಲೇ 2 ದಿನದಿಂದ ಇದ್ದೇನೆ. ಆದರೂ ನನ್ನ ಹೆಸರೇ ಪದೇ ಪದೇ ಪ್ರಸ್ತಾಪ ಮಾಡ್ತಿದ್ದಾರೆ. ಯಾಕೆ ಅಂತಾ ಗೊತ್ತಿಲ್ಲ. ನನ್ನ ಹೆಸರು ಡ್ಯಾಮೇಜ್ ಮಾಡೋದಕ್ಕೆ ಈ ರೀತಿ ಕಾಂಗ್ರೆಸಿನ ಸ್ವಯಂ ಘೋಷಿತ ಪ್ರಭಾವಿ ನಾಯಕರು ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.ಇದೇ ಸಮಯದಲ್ಲಿ ಕಾಂಗ್ರೆಸ್‍ನಲ್ಲಿ ಆಂತರಿಕ ಕಿತ್ತಾಟ ಇತ್ತು ಎನ್ನುವುದನ್ನು ಒಪ್ಪಿಕೊಂಡ ಜಾರಕಿಹೊಳಿ ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಅವರು ಮಧ್ಯಸ್ತಿಕೆ ವಹಿಸಿಕೊಂಡು ಸಮಸ್ಯೆ ಬಗೆಹರಿಸಿದ್ದಾರೆ ಎಂದು ತಿಳಿಸಿದರು.ಇಲ್ಲದಿರುವ ವಿಚಾರವನ್ನು ಮಾಧ್ಯಮದವರೇ ತಪ್ಪಾಗಿ ಪ್ರಚಾರ ಮಾಡುತ್ತಿದ್ದೀರಿ. ಟಿವಿಯಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳನ್ನು ನೀವೇ ಆತ್ಮಲೋಕನ ಮಾಡಿಕೊಳ್ಳಬೇಕು. ನಾನು ಬೆಂಗಳೂರಿನಲ್ಲೇ ಇದ್ದೇನೆ. ಆದರೆ ಮುಂಬೈನಲ್ಲಿ ಇದ್ದೇನೆ ಅಂತ ಸುಳ್ಳು ಸುದ್ದಿ ಹರಿದಾಡಿದೆ. ಮೊದಲು ಸುಳ್ಳು ಪ್ರಚಾರ ಮಾಡುವುದನ್ನು ನಿಲ್ಲಿಸಿ ಎಂದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictvSign in to your account
Username or Email Address


Password

 Remember Me


