ಕೋಲಾರ: ಅಸಭ್ಯವಾಗಿ ತರಗತಿಯಲ್ಲಿ ವರ್ತಿಸಿದ ಶಿಕ್ಷಕನಿಗೆ ವಿದ್ಯಾರ್ಥಿನಿಯರು ಚಪ್ಪಲಿಯಿಂದ ಹೊಡೆಯಲು ಮುಂದಾದ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಆಲವಾಟದಲ್ಲಿ ನಡೆದಿದೆ.ಆಲವಾಟ ಹಿರಿಯ ಪ್ರಾಥಮಿಕ ಶಾಲೆಯ ಕೃಷ್ಣಪ್ಪ ಅಸಭ್ಯವಾಗಿ ವಿದ್ಯಾರ್ಥಿನಿಯರ ಜೊತೆಗೆ ವರ್ತಿಸಿದ ಇಂಗ್ಲೀಷ್ ಶಿಕ್ಷಕ. ಕೃಷ್ಣಪ್ಪ ಕಳೆದ ಕೆಲವು ದಿನಗಳಿಂದ ವಿದ್ಯಾರ್ಥಿನಿಯರ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಈ ಕುರಿತು ವಿದ್ಯಾರ್ಥಿನಿಯರ ಪೋಷಕರಿಗೆ ಇಂದು ದೂರಿದ್ದಾರೆ. ಶಾಲೆಗೆ ಬಂದ ಪೋಷಕರು ಕಾಮುಕ ಶಿಕ್ಷಕನಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.ಯಾವ ರೀತಿಯ ಒಳ ಉಡುಪು ಹಾಕಿಕೊಂಡು ಬಂದಿರುವೆ. ನನ್ನ ಪಕ್ಕದಲ್ಲಿ ಬಂದು ಮಲಗುತ್ತೀಯಾ? ಅವರ ಮಕ್ಕಳಿಗೆ ಹೀಗೆ ಕೇಳುತ್ತಾರಾ? ವಿದ್ಯಾರ್ಥಿನಿಯರನ್ನು ಆಫೀಸ್ ರೂಮ್‍ಗೆ ಕರೆದು, ಲೈಂಗಿಕ ದೌರ್ಜನ್ಯ ಮಾಡುತ್ತಾನೆ. ಎಲ್ಲಂದರಲ್ಲಿ ಮುಟ್ಟಿ, ನೀನು ನನ್ನ ಡಾರ್ಲಿಂಗ್ ಅಂತಾ ಹೇಳಿ ಮುತ್ತಿಕ್ಕುತ್ತಾನೆ. ಇದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯ ಪದಗಳಿಂದ ನಿಂದಿಸುತ್ತಾನೆ ಎಂದು ವಿದ್ಯಾರ್ಥಿನಿಯೊಬ್ಬಳು ಗ್ರಾಮಸ್ಥರ ಎದುರೇ ಆಕ್ರೋಶ ಹೊರ ಹಾಕಿದ್ದಾಳೆ.ವಿದ್ಯಾರ್ಥಿಯ ಹೇಳಿಕೆ ಹೇಳಿದ ವ್ಯಕ್ತಿಯೊಬ್ಬರು ಚಪ್ಪಲಿಯಿಂದ ಹೊಡೆದು ಬುದ್ಧಿ ಕಲಿಸು ಅಂದಿದ್ದೇ ತಡ, ವಿದ್ಯಾರ್ಥಿನಿ ಚಪ್ಪಲಿಯಿಂದ ಬಾರಿಸಲು ಮುಂದಾಗಿದ್ದಳು. ಆದರೆ ಶಿಕ್ಷಕರಿಗೆ ಹೊಡೆಯುವುದು ಯೋಗ್ಯವಲ್ಲವೆಂದು ಹಿರಿಯರು ಹೇಳಿದ್ದಕ್ಕೆ ವಿದ್ಯಾರ್ಥಿನಿ ಹಿಂದಕ್ಕೆ ಸರಿದಿದ್ದಾಳೆ.ಹಾಲವಾಟ ಹಾಗೂ ಬಂಡಪಲ್ಲಿ ಸುಮಾರು ವಿದ್ಯಾರ್ಥಿನಿಯರು ಪೋಷಕರನ್ನು ಇಂದು ಶಾಲೆಗೆ ಕರೆ ತಂದಿದ್ದರು. ಬಳಿಕ ಶಾಲಾ ಮುಖ್ಯಶಿಕ್ಷಕ ಕೆ.ಎಸ್.ಲಕ್ಷ್ಮಣ ಅವರ ಜೊತೆಗೆ ಮಾತನಾಡಿದ ಪೋಷಕರು ಶಿಕ್ಷಕನ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಶಿಕ್ಷಕನ ವಿರುದ್ಧ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಘಟನೆಯ ಶ್ರೀನಿವಾಸಪುರ ಕ್ಷೇತ್ರ ಶಿಕ್ಷಣಾಧಿಕಾರಿ ಷಂಶುನ್ನಿಸ್ ಅವರ ಮಾಹಿತಿ ಗಮನಕ್ಕೆ ಬಂದಿದ್ದು, ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕ ರತ್ನಯ್ಯ ಅವರಿಗೆ ತಿಳಿಸಿದ್ದೇನೆ ಎಂದಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictvSign in to your account
Username or Email Address


Password

 Remember Me


