ದಾವಣಗೆರೆ: ಎಂಟು ವರ್ಷದ ಬಾಲಕಿ ಮೇಲೆ ವೃದ್ಧನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ.ದಾವಣಗೆರೆಯ ನಿಟ್ಟುವಳ್ಳಿ ನಿವಾಸಿಯಾದ ಅಜೀಜ್ (58) ಅತ್ಯಾಚಾರ ಮಾಡಲು ಯತ್ನಿಸಿದ ವೃದ್ಧ. ಈತ ಬಾಲಕಿ ಟ್ಯೂಷನ್ ಗೆಂದು ತನ್ನ ಮನೆಗೆ ಬಂದಾಗ ಈ ರೀತಿ ನೀಚ ಕೃತ್ಯ ಎಸಗಲು ಯತ್ನಿಸಿದ್ದಾನೆ.ಆರೋಪಿ ಅಜೀಜ್ ನ ಮಗ ಮಕ್ಕಳಿಗೆ ಪ್ರತಿನಿತ್ಯ ಟ್ಯೂಷನ್ ಕೊಡುತ್ತಿದ್ದನು. ಟ್ಯೂಷನ್ ಗೆ ಮಕ್ಕಳು ಬರುತ್ತಿದ್ದರು. ಇದೇ ರೀತಿ ಟ್ಯೂಷನ್ ಗೆಂದು ಎಂಟು ವರ್ಷದ ಬಾಲಕಿ ಕೂಡ ಬಂದಿದ್ದಳು. ಆಗ ಆರೋಪಿ ವೃದ್ಧ ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಬಳಿಕ ಹೇಗೋ ತಪ್ಪಿಸಿಕೊಂಡು ಬಾಲಕಿ ಮನೆಗೆ ಹೋಗಿದ್ದಾಳೆ.ಆರೋಪಿ ವೃದ್ಧನ ಅತ್ಯಾಚಾರ ಯತ್ನದ ಬಗ್ಗೆ ಬಾಲಕಿ ಪೋಷಕರಿಗೆ ಹೇಳಿದ್ದಾಳೆ. ವಿಷಯ ತಿಳಿಸಿ ಪೋಷಕರು ಕೂಡಲೇ ಆರೋಪಿ ಅಜೀಜ್ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.ಸದ್ಯಕ್ಕೆ ಆರೋಪಿ ಅಜೀಜ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictvSign in to your account
Username or Email Address


Password

 Remember Me


