                                                           ಸಾಂದರ್ಭಿಕ ಚಿತ್ರಬೆಳಗಾವಿ: ನಾಯಿಗಳು ಮಗುವನ್ನೇ ತಿನ್ನಲು ಯತ್ನಿಸಿದ ಆಘಾತಕಾರಿ ಘಟನೆಯೊಂದು ಬೆಳಗಾವಿ ತಾಲೂಕಿನ ಪಂತಬಾಳೇಕುಂದ್ರಿ ಗ್ರಾಮದಲ್ಲಿ ನಡೆದಿದೆ.2 ವರ್ಷದ ಅಬ್ಬಾಸ್ ಸನದಿ ನಾಯಿಗಳ ದಾಳಿಗೆ ಒಳಗಾದ ಮಗು. ಬೀದಿ ನಾಯಿಗಳು ಗಂಭೀರವಾಗಿ ಕಚ್ಚಿದ ಪರಿಣಾಮ ಅಬ್ಬಾಸ್ ಸ್ಥಿತಿ ಚಿಂತಾಜನಕವಾಗಿದೆ.ಅಬ್ಬಾಸ್ ಸನದಿ ಮನೆ ಮುಂದೆ ಶೌಚಕ್ಕೆ ಕುಳಿತಿದ್ದನು. ಈ ವೇಳೆ ಬೀದಿ ನಾಯಿಗಳು ಏಕಾಏಕಿ ಆತನ ಮೇಲೆ ದಾಳಿ ಮಾಡಿವೆ. ಪರಿಣಾಮ ಮುಖ, ತಲೆ ಭಾಗ ಸೇರಿ ಮೈಯೆಲ್ಲಾ ಕಚ್ಚಿ, ತಿಂದು ಹಾಕುವ ಪ್ರಯತ್ನ ಮಾಡಿವೆ. ಘಟನೆಯಿಂದ ಗಂಭೀರ ಗಾಯಗೊಂಡ ಅಬ್ಬಾಸ್ ನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.ಸದ್ಯ ಅಬ್ಬಾಸ್ ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಗಾವಿಯ ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictvSign in to your account
Username or Email Address


Password

 Remember Me


