ಕಲಬುರಗಿ: ರಾಮ ಸುಳ್ಳು ಅಂದೋರೆಲ್ಲ ಗೋರಿ ಸೇರಿದ್ದು, ಇನ್ನೊಬ್ಬ ಉಳಿದಿದ್ದಾನೆ. ಆತ ಮೈಸೂರಿನ ಸೈತಾನ್, ಅವನೂ ಗೋರಿ ಸೇರಲಿದ್ದಾನೆ ಎಂದು ಆಂದೋಲ ಕರುಣೇಶ್ವರ ಮಠದ ಸಿದ್ದಲಿಂಗಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಜಗತ್ ವೃತ್ತದಲ್ಲಿ ಆಯೋಜಿಸಿರುವ ರಾಮ ಮಂದಿರ ಕಟ್ಟುವ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿ, ರಾಮ ಸುಳ್ಳು ಎಂದಿದ್ದ ಕರುಣಾನಿಧಿ ಗೋರಿ ಸೇರಿದ್ದು, ಕಿಡ್ನಿ ವೈಫಲ್ಯದಿಂದ ಯು.ಆರ್.ಅನಂತಮೂರ್ತಿ ಗೋರಿ ಸೇರಿದ್ದಾರೆ. ಹಿಂದೂಗಳ ವಿರುದ್ಧ ಮಾತನಾಡುತ್ತಿದ್ದ ಗೌರಿ ಲಂಕೇಶ್ ಗೋರಿ ಸೇರಿದ್ದಾಳೆ. ಇನ್ನೊಬ್ಬ ಉಳಿದಿದ್ದಾನೆ. ಮೈಸೂರಿನ ಸೈತಾನ್ ಅವನೂ ಗೋರಿ ಸೇರಲಿದ್ದಾನೆ ಎಂದು ಪರೋಕ್ಷವಾಗಿ ಭಗವಾನ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.ಇದೇ ವೇಳೆ ಅಯ್ಯಪ್ಪ ದೇಗುಲ ಪ್ರವೇಶಿಸಲು ಮುಂದಾದ ಫಾತಿಮಾಳನ್ನು ವೇಶ್ಯೆ ಎಂದು ಲೇವಡಿ ಮಾಡಿದ ಸ್ವಾಮೀಜಿ, ಕಿಸ್ ಆಫ್ ಲವ್ ಕಾರ್ಯಕ್ರಮ ಆಯೋಜಿಸಿದ ಇಂಥವರು ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸುವುದಾಗಿ ಹೇಳುತ್ತಾರೆ. ಮೊದಲು ಇಂಥವರನ್ನು ಜೈಲಿಗೆ ಕಳುಹಿಸಬೇಕು ಎಂದು ಕಿಡಿಕಾರಿದರು. ರಾಮನ ಹೆಸರಲ್ಲಿ ಮೋದಿ ಅಧಿಕಾರಕ್ಕೆ ಬಂದಿದ್ದಾರೆ. ಹೀಗಾಗಿ ಮೋದಿ ರಾಮ ಮಂದಿರ ನಿರ್ಮಾಣಕ್ಕೆ ಬದ್ಧರಾಗಿರಬೇಕು ಎಂದು ಇದೇ ವೇಳೆ ಆಗ್ರಹಿಸಿದರು.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictvSign in to your account
Username or Email Address


Password

 Remember Me


