ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿವ ದರ್ಶನ ಬಾರದ ಮಾಜಿ ಸಂಸದೆ, ನಟಿ ರಮ್ಯಾಗೆ ಅವರಿಗೆ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಗಿ ಮಾತನಾಡಿದ್ದಾರೆ.ನೀವು ನಮ್ಮ ಸಹೋದರಿಯಂತೆ. ಈಗಲಾದರೂ ಅಂಬರೀಶ್ ಸಮಾಧಿ ಬಳಿ ಬಂದು ವಂದಿಸಿ ನಿಮ್ಮ ತಪ್ಪು ತಿದ್ದಿಕೊಳ್ಳಿ ಎಂದು ಉಪ್ಪರಕನಹಳ್ಳಿ ಗ್ರಾಮದ ಶಿವಕುಮಾರ್ ಆರಾಧ್ಯ ಎಂಬವರು ಅಂಬಿ ದರ್ಶನಕ್ಕೆ ಬಾರದ ರಮ್ಯಾ ವಿರುದ್ಧ ವ್ಯಂಗ್ಯ ಮಾತನಾಡಿದ್ದಾರೆ. ಅಲ್ಲದೇ ಸಹೋದರಿ ತಪ್ಪು ಮಾಡಿದಾಗ ಬೈದು ಹೊಡೆದು ಬುದ್ದಿ ಹೇಳುವುದು ಸಹೋದರರ ಕರ್ತವ್ಯ. ಆದ್ದರಿಂದ ನೀವು ಮಾಡಿದ ತಪ್ಪು ತಿಳಿಸಿ ಬುದ್ದಿ ಹೇಳುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಮ್ಯಾಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಮಂಡ್ಯ ಜನತೆವಿಡಿಯೋದಲ್ಲಿ ಏನಿದೆ?
ನಮಸ್ಕಾರ ರಮ್ಯಕ್ಕ. ಹಿಂದೆಲ್ಲಾ ನಾವು ನಿಮಗೆ ಬಾಡಿಗೆ ಸಹೋದರ ಎಂದು ಹೇಳಿ ವೈಯಕ್ತಿಕವಾಗಿ ತಮಾಷೆ ಮಾಡಿರಬಹುದು. ಆದರೆ ಈಗ ನಾನು ಬಾಡಿಗೆ ಸಹೋದರ ಎಂದು ತಮಾಷೆ ಮಾಡುವುದಿಲ್ಲ. ನಾನು ಈಗ ನಿಮ್ಮ ಬಳಿ ಗಂಭೀರವಾಗಿ ಸಲಹೆ ನೀಡುತ್ತಿದ್ದೇನೆ. ರಮ್ಯಕ್ಕ ನೀವು ಎಲ್ಲೋ ಒಂದು ಕಡೆ ತಪ್ಪು ಮಾಡುತ್ತಿದ್ದೀರಾ. ನಮ್ಮ ಹಳ್ಳಿ ಕಡೆಯಲ್ಲಿ ಯಾರಾದರೂ ತಪ್ಪು ಮಾಡಿದರೆ, ಅವರ ಅಣ್ಣ-ತಮ್ಮಂದಿರು ಬೈದು ತಲೆ ಮೇಲೆ ಹೊಡೆದು ಬುದ್ಧಿ ಹೇಳುತ್ತಾರೆ. ಇದನ್ನೂ ಓದಿ: ಮಾಜಿ ಸಂಸದೆ ರಮ್ಯಾ ನಿವಾಸಕ್ಕೆ ಪೊಲೀಸ್ ಭದ್ರತೆನಮ್ಮ ಹಳ್ಳಿಯಲ್ಲಿ ಎಂತಹ ದಾಯಾದಿಗಳಾದರೂ, ವೈರಿಗಳಾದರೂ ಸತ್ತರೆ, ಅವರ ಮನೆ ಬಾಗಿಲಿಗೆ ಹೋಗಿ ಅವರ ಮುಖ ನೋಡುವ ಸಂಸ್ಕೃತಿ ನಮ್ಮಲ್ಲಿದೆ. ನಾವು ಹಳ್ಳಿ ಜನ. ನಾವು ಗದ್ದೆ ಊಟ ಮಾಡುತ್ತೇವೆ. ನಾವು ಹೋರಾಟ ಮಾಡಬಹುದು ಆದರೆ ನಾವು ಗದ್ದೆ ಅನ್ನ ಊಟ ಮಾಡುತ್ತೇವೆ. ನಿಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ನಾವು ಮಾಧ್ಯಮದಲ್ಲಿ ನೋಡಿದೆ ನಿಮಗೆ ಕಾಲು ನೋವಿದೆ ಎಂದು ತಿಳಿಯಿತು. ನಿಮಗೆ ಕಾಲು ನೋವು ಕಡಿಮೆ ಆದಾಗ ದಯವಿಟ್ಟು ಮಾನವೀಯತೆ ದೃಷ್ಟಿಯಿಂದ, ಮನುಷ್ಯತ್ವದಿಂದ ನೀವು ಅಂಬಿ ಅವರ ಸಮಾಧಿಗೆ ಬಂದು ಹಾಲು-ತುಪ್ಪ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಹೇಳಿದ್ದಾರೆ.ನಾವು ಯಾವುದೇ ಕಾರಣಕ್ಕೂ ಟಿವಿಯಲ್ಲಿ ಬರಬೇಕು. ನಿಮ್ಮನ್ನು ಹೀಯಾಳಿಸಬೇಕು ಎಂಬ ಉದ್ದೇಶದಿಂದ ನಿಮ್ಮನ್ನು ಮಾತನಾಡುತ್ತಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಲೇಪನ ಮಾಡುತ್ತಿಲ್ಲ. ನಿಮ್ಮನ್ನು ಕೈಮುಗಿದು ಕೇಳಿಕೊಳ್ಳುತ್ತೇನೆ. ಯಾವುದೋ ಜನ್ಮದಲ್ಲಿ ನೀವು ನಮಗೆ ಸಹೋದರಿ ಆಗಿರಬಹುದು. ಹಾಗಾಗಿ ನಿಮ್ಮ ಬಳಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ದಯವಿಟ್ಟು ಈ ವಾರದಲ್ಲಿ ನಿಮ್ಮ ಕರ್ತವ್ಯವನ್ನು ಮಾಡಿ. ಅಂಬಿ ಅಣ್ಣನ ಸಮಾಧಿಗೆ ಹೋಗಿ ಪೂಜೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictvSign in to your account
Username or Email Address


Password

 Remember Me


